HomeLatest Newsಕೋಟ್ಯಾಂತರ ರೂ. ವಂಚನೆ ಪ್ರಕರಣ : 'ಅಲ್ ಫಲಾಹ್' ವಿವಿಯ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ...

ಕೋಟ್ಯಾಂತರ ರೂ. ವಂಚನೆ ಪ್ರಕರಣ : ‘ಅಲ್ ಫಲಾಹ್’ ವಿವಿಯ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ ಅರೆಸ್ಟ್.!

ಫರೀದಾಬಾದ್ :  ಹರಿಯಾಣದ ಫರೀದಾಬಾದ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯವು ಮತ್ತೊಮ್ಮೆ ತನಿಖಾ ಸಂಸ್ಥೆಗಳ ಕಣ್ಣಿಗೆ ಬಿದ್ದಿದೆ. ದೆಹಲಿ ಪೊಲೀಸರ ಕ್ರೈಮ್ ಬ್ರಾಂಚ್ ವಿಭಾಗವು ವಿಶ್ವವಿದ್ಯಾಲಯದ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಬಂಧಿಸಿದೆ. ಬಂಧನದ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ನಾಲ್ಕು ದಿನಗಳ ಕಸ್ಟಡಿಗೆ ಪಡೆದಿದ್ದಾರೆ.

ಈ ಹಿಂದೆ ಭಯೋತ್ಪಾದಕ ಜಾಲಕ್ಕೆ ಸಂಬಂಧಿಸಿದ ತನಿಖೆಯ ಸಂದರ್ಭದಲ್ಲಿ ಈ ವಿಶ್ವವಿದ್ಯಾಲಯದ ಹೆಸರು ಕೇಳಿಬಂದಿತ್ತು. ಎನ್‌ಐಎ (NIA) ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಈ ಸಂಸ್ಥೆಗೆ ಸೇರಿದ ಇಬ್ಬರು ವೈದ್ಯರಾದ ಮುಜಮ್ಮಿಲ್ ಅಹ್ಮದ್ ಗನೈ ಮತ್ತು ಶಾಹೀನ್ ಸಯೀದ್ ಅವರನ್ನು ಬಂಧಿಸಿದ್ದರು. ಅಷ್ಟೇ ಅಲ್ಲದೆ, ಕೆಂಪು ಕೋಟೆ ಸ್ಫೋಟ ಪ್ರಕರಣದ ದೋಷಿ ಡಾ. ಉಮರ್ ಕೂಡ ಇದೇ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ನ್ಯಾಷನಲ್ ಅಸೆಸ್‌ಮೆಂಟ್ ಅಂಡ್ ಅಕ್ರೆಡಿಟೇಶನ್ ಕೌನ್ಸಿಲ್ (NAAC) ನಿಂದ ಮಾನ್ಯತೆ ಪಡೆದಿರುವುದಾಗಿ ಈ ವಿಶ್ವವಿದ್ಯಾಲಯವು ಸುಳ್ಳು ಹೇಳಿಕೊಂಡಿತ್ತು. ನಕಲಿ ದಾಖಲೆಗಳ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ದಾರಿ ತಪ್ಪಿಸಿದ ಆರೋಪದ ಮೇಲೆ ನವೆಂಬರ್‌ನಲ್ಲಿ NAAC ಈ ಸಂಸ್ಥೆಗೆ ನೋಟಿಸ್ ನೀಡಿತ್ತು. ಇದಾದ ಬಳಿಕ ವಿವಿಯ ವೆಬ್‌ಸೈಟ್ ಅನ್ನು ಆಫ್‌ಲೈನ್ ಮಾಡಲಾಗಿದೆ.ಯುಜಿಸಿ ಕಾಯ್ದೆಯ ಸೆಕ್ಷನ್ 12(B) ಅಡಿಯಲ್ಲಿ ಮಾನ್ಯತೆಗಾಗಿ ಈ ವಿಶ್ವವಿದ್ಯಾಲಯವು ಎಂದಿಗೂ ಅರ್ಜಿ ಸಲ್ಲಿಸಿಯೇ ಇರಲಿಲ್ಲ. ಆದರೂ ಸಹ ಮಾನ್ಯತೆ ಪಡೆದ ಸಂಸ್ಥೆಯೆಂದು ಪ್ರಚಾರ ಮಾಡಿ ಆರ್ಥಿಕ ಲಾಭ ಪಡೆಯಲು ಯತ್ನಿಸಿದೆ ಎಂದು ಯುಜಿಸಿ ಸ್ಪಷ್ಟಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು (ED) ಈಗ ಈ ಸಂಸ್ಥೆಯ ಫಂಡಿಂಗ್ ಮತ್ತು ವೈದ್ಯಕೀಯ ಸಿಬ್ಬಂದಿಯ ಆರ್ಥಿಕ ವಹಿವಾಟುಗಳ ಬಗ್ಗೆ ತನಿಖೆ ಆರಂಭಿಸಲು ಸಿದ್ಧತೆ ನಡೆಸಿದೆ.

ಅಲ್ ಫಲಾಹ್ ವಿಶ್ವವಿದ್ಯಾಲಯದ ಈ ಹಗರಣವು ಅಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆತಂಕದ ನೆರಳು ಮೂಡಿಸಿದೆ. ಯುಜಿಸಿ (UGC) ಪ್ರಕಾರ ಈ ಸಂಸ್ಥೆಯು ಸೆಕ್ಷನ್ 12(B) ಅಡಿಯಲ್ಲಿ ಮಾನ್ಯತೆ ಪಡೆದಿಲ್ಲ ಎಂಬ ಅಂಶ ಹೊರಬಂದಿರುವುದರಿಂದ, ಇಲ್ಲಿ ಪಡೆದ ಪದವಿಗಳು ಸರ್ಕಾರಿ ಉದ್ಯೋಗಗಳಿಗೆ ಅಥವಾ ಉನ್ನತ ವ್ಯಾಸಂಗಕ್ಕೆ ಅರ್ಹವೇ ಎಂಬ ಪ್ರಶ್ನೆ ಎದ್ದಿದೆ.

ದೆಹಲಿ ಕ್ರೈಮ್ ಬ್ರಾಂಚ್ ಮತ್ತು ಇಡಿ (ED), ಜವಾದ್ ಸಿದ್ದಿಕಿ ಅವರಿಗೆ ಹರಿದು ಬಂದಿರುವ ಕೋಟ್ಯಂತರ ರೂಪಾಯಿಗಳ ಮೂಲ ಯಾವುದು? ಅದು ವಿದೇಶಗಳಿಂದ ಬಂದಿದೆಯೇ ಅಥವಾ ಅಕ್ರಮ ಹಾದಿಯಲ್ಲಿ ಬಂದಿದೆಯೇ ಎಂಬುದನ್ನು ತನಿಖೆ ಮಾಡುತ್ತಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular