HomeKarnatakaBREAKING: ನಾಪತ್ತೆಯಾಗಿರುವ ಮೊಯಿದ್ದೀನ್ ಬಾವಾ ಸಹೋದರನ ಕಾರು ಕುಳೂರು ಸೇತುವೆ ಮೇಲೆ ಪತ್ತೆ

BREAKING: ನಾಪತ್ತೆಯಾಗಿರುವ ಮೊಯಿದ್ದೀನ್ ಬಾವಾ ಸಹೋದರನ ಕಾರು ಕುಳೂರು ಸೇತುವೆ ಮೇಲೆ ಪತ್ತೆ

ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ ನಾಪತ್ತೆಯಾಗಿದ್ದು, ಅವರ ಕಾರು ಮಂಗಳೂರಿನ ಕುಳೂರು ಸೇತುವೆ ಬಳಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ (52) ಏಕಾಏಕಿ ನಾಪತ್ತೆಯಾಗಿದ್ದು, ಕುಟುಂಬದವರಲ್ಲಿ ಆತಂಕ ಮೂಡಿಸಿದೆ. ಮುಮ್ತಾಜ್ ಅವರೇ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇದೀಗ ಅವರ BMW ಕಾರು ಕುಳೂರು ಸೇತುವೆ ಮೇಲೆ ಡ್ಯಾಮೇಜ್ ಆಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮುಮ್ತಾಜ್ ಅಲಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು, ಮುಳುಗು ತಜ್ಞರು ಆಗಮಿಸಿದ್ದು, ನದಿಯಲ್ಲಿ ಶೋಧಕಾರ್ಯಾಚರಣೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಿಗ್ಗೆಯಷ್ಟೇ ಮುಮ್ತಾಜ್ ಅಲಿ ತಮ್ಮ ಮಗನಿಗೆ ತಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಸಂದೇಶ ರವಾನಿಸಿದ್ದರಂತೆ. ಇದರಿಂದ ಕುಟುಂಬದವರು ಗಾಬರಿಯಾಗಿದ್ದು, ಮುಮ್ತಾಜ್ ಅಲಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular