
ಇತ್ತೀಚೆಗೆ ಮಗಳೇ ತಾಯಿಯನ್ನು ಕೊಲೆ ಮಾಡಿ ಶವವನ್ನು ಸೂಟ್ ಕೇಸ್ ನಲ್ಲಿ ಪೊಲೀಸ್ ಠಾಣೆಗೆ ತಂದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದೆ.
ತಂದೆ ಗಂಗರಾಜು ಅಲಿಯಾಸ್ ರಾಜು ಎಂಬುವವರು ಮನೆ ಹೊರಗಡೆ ಮಲಗಿದ್ದರು. ಈ ವೇಳೆ ಪುತ್ರ ಚೇತನ್ ಎಂಬಾತ ಮಲಗಿದ್ದ ತಂದೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಮಾಗಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

