‘ಕೈ’ವಾಡದಿಂದ ಮುಡಾ ಸಾಕ್ಷಿ ನಾಶ: ಆಯುಕ್ತರ ನಿವಾಸದ ಡಿವಿಆರ್ ನಾಪತ್ತೆ ಕೆಲಸ ಯಾರದ್ದೆಂದು ಬಿಡಿಸಿ ಹೇಳಬೇಕಿಲ್ಲ; ಬಿಜೆಪಿ ಟಾಂಗ್

ಬೆಂಗಳೂರು: ಸ್ಕ್ಯಾಂ ಸಿ.ಎಂ ಸಿದ್ದರಾಮಯ್ಯ 5 ಸಾವಿರ ಕೋಟಿ ಮುಡಾ ಹಗರಣವನ್ನು ಸಾರಿಸಿ ಗುಡಿಸಿ ಹಾಕಲು ಸಾಕ್ಷ್ಯಗಳನ್ನು ನಾಶ ಪಡಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿದ್ದ ಅಷ್ಟೂ ಸಿಸಿಟಿವಿಗಳು ನಾಪತ್ತೆಯಾಗಿವೆ. ಮುಡಾ ಚಲನವಲನಗಳನ್ನು ರೆಕಾರ್ಡ್ ಮಾಡಿದ್ದ ಡಿವಿಆರ್ ಕಾಣೆಯಾಗಿರುವುದರ ಹಿಂದಿನ ‘ಕೈ’ ಕೆಲಸ ಯಾರದು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ ಎಂದು ಕಿಡಿಕಾರಿದೆ.

ಹಗರಣ ಹೊರಬೀಳುತ್ತಿದ್ದಂತೆ, ಮುಖ್ಯಮಂತ್ರಿಗಳ ಆಪ್ತರಕ್ಷಕ ಭೈರತಿ ಸುರೇಶ ಅವರು ವಿಶೇಷ ವಿಮಾನದಲ್ಲಿ ಬಂದು ಮುಡಾ ಫೈಲುಗಳನ್ನು ಎಗರಿಸಿದ್ದರು. ಪ್ರಸ್ತುತ ಮುಡಾ ಹಗರಣದಿಂದ ಹೊರಬರಲು ಎಲ್ಲ ವಾಮ ಮಾರ್ಗಗಳನ್ನೂ ತುಳಿದಿರುವ ಸಿಎಂ ಅವರ ಪ್ರಯತ್ನದ ಮುಂದಿನ ಭಾಗವೇ ಈ ಸಿಸಿಟಿವಿ ಕಣ್ಮರೆ ಎನ್ನುವುದು ನಾಡಿನ ಜನತೆಗೆ ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read