HomeLatest NewsViral Video | ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ರೊಂದಿಗೆ ಗಾಲ್ಫ್​ ಆಡಿದ ಎಂ.ಎಸ್....

Viral Video | ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ರೊಂದಿಗೆ ಗಾಲ್ಫ್​ ಆಡಿದ ಎಂ.ಎಸ್. ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್​ ಧೋನಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜೊತೆಯಲ್ಲಿ ಗಾಲ್ಫ್​ ಆಟವನ್ನಾಡಿದ್ದು ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ.

ಇಬ್ಬರೂ ಗಾಲ್ಫ್​ಮೈದಾನದಲ್ಲಿ ಫೋಟೋಗೆ ಪೋಸ್​ ನೀಡಿದ್ದು ಈ ಫೋಟೋ ಸಹ ವೈರಲ್​ ಆಗಿದೆ. ಫೋಟೋದಲ್ಲಿ ಟ್ರಂಪ್​ ಕೆಂಪು ಬಣ್ಣದ MAGA (ಮೇಕ್​ ಅಮೆರಿಕ ಗ್ರೇಟ್​ ಅಗೇನ್​) ಕ್ಯಾಪ್​ ಧರಿಸಿರೋದನ್ನ ನೀವು ಕಾಣಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದುಬೈ ಮೂಲದ ಉದ್ಯಮಿ ಹಿತೇಶ್​ ಸಾಂಘ್ವಿ, ಧೋನಿ ಹಾಗೂ ಡೊನಾಲ್ಡ್​ ಟ್ರಂಪ್​ ಗಾಲ್ಫ್​ ಆಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾರ್ಲೋಸ್ ಅಲ್ಕರಾಜ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಿನ ಯುಎಸ್ ಓಪನ್ 2023 ಕ್ವಾರ್ಟರ್‌ಫೈನಲ್ ಪಂದ್ಯದಲ್ಲೂ MS ಧೋನಿ ಕಾಣಿಸಿಕೊಂಡಿದ್ದರು.

ಇನ್ನು ಈ ಫೋಟೋ ಹಾಗೂ ವಿಡಿಯೋಗಳನ್ನ ಕಣ್ತುಂಬಿಕೊಂಡ ಧೋನಿ ಅಭಿಮಾನಿಗಳು ಥಾಲಾ (ತಮಿಳು ಅರ್ಥ ದೇವರು) ಎಂದು ಕ್ಯಾಪ್ಟನ್​ ಕೂಲ್​ರನ್ನ ಕೊಂಡಾಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular