HomeLatest Newsಮುಂಬೈ ವಿರುದ್ಧ ಇಂದು ಧೋನಿ ಆಡ್ತಾರಾ ಇಲ್ವಾ? ಅಂತಿಮ ಕ್ಷಣದ ನಿರ್ಧಾರದ ಮೇಲೆ ಎಲ್ಲರ ಕಣ್ಣು

ಮುಂಬೈ ವಿರುದ್ಧ ಇಂದು ಧೋನಿ ಆಡ್ತಾರಾ ಇಲ್ವಾ? ಅಂತಿಮ ಕ್ಷಣದ ನಿರ್ಧಾರದ ಮೇಲೆ ಎಲ್ಲರ ಕಣ್ಣು

ಐಪಿಎಲ್ 2026ರ ಅತ್ಯಂತ ನಿರೀಕ್ಷಿತ ಪಂದ್ಯವಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಹಣಾಹಣಿಗೆ ವಾಂಖೆಡೆ ಕ್ರೀಡಾಂಗಣ ಸಜ್ಜಾಗಿದೆ. ಈ ಬೆನ್ನಲ್ಲೇ ಸಿಎಸ್‌ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಗಾಯದ ಸಮಸ್ಯೆಯಿಂದಾಗಿ ಈ ಆವೃತ್ತಿಯ ಮೊದಲ ಆರು ಪಂದ್ಯಗಳಿಂದ ಹೊರಗುಳಿದಿದ್ದ ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ಮರಳುವ ಮುನ್ಸೂಚನೆ ನೀಡಿದ್ದಾರೆ.

ನೆಟ್ಸ್‌ನಲ್ಲಿ ಧೋನಿ ಭರ್ಜರಿ ಅಭ್ಯಾಸ: ಕಾಲಿನ ಸ್ನಾಯು ಸೆಳೆತದಿಂದ (Calf Strain) ಬಳಲುತ್ತಿದ್ದ ಧೋನಿ, ಕಳೆದ ಎರಡು ದಿನಗಳಿಂದ ಮುಂಬೈನ ವಾಂಖೆಡೆ ಮೈದಾನದಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಅಭ್ಯಾಸದ ವೇಳೆ ಧೋನಿ ಅತ್ಯಂತ ಲವಲವಿಕೆಯಿಂದ ಕಂಡುಬಂದಿದ್ದು, ಓಡುವಾಗ ಯಾವುದೇ ತೊಂದರೆ ಅನುಭವಿಸುತ್ತಿಲ್ಲ ಎಂದು ವರದಿಗಳು ತಿಳಿಸಿವೆ. ಮಂಗಳವಾರ ಮತ್ತು ಬುಧವಾರ ನಡೆದ ತರಬೇತಿ ಅವಧಿಯಲ್ಲಿ ಧೋನಿ ಸಿಡಿಸಿದ ಸಿಕ್ಸರ್‌ಗಳು ಅವರು ಲಯಕ್ಕೆ ಮರಳುತ್ತಿರುವುದಕ್ಕೆ ಸಾಕ್ಷಿಯಂತಿವೆ.

ಅಂತಿಮ ನಿರ್ಧಾರ ಧೋನಿಯದ್ದೇ: ಧೋನಿ ಅವರ ಫಿಟ್ನೆಸ್ ಬಗ್ಗೆ ಮಾತನಾಡಿರುವ ಚೆನ್ನೈ ತಂಡದ ಬೌಲಿಂಗ್ ಕೋಚ್ ಎರಿಕ್ ಸಿಮ್ಮನ್ಸ್, “ವೈದ್ಯಕೀಯ ತಂಡವು ಪಂದ್ಯದ ದಿನ ಅವರ ಫಿಟ್ನೆಸ್ ಪರಿಶೀಲಿಸಲಿದೆ. ಆದರೆ ಕಣಕ್ಕಿಳಿಯುವ ಬಗ್ಗೆ ಅಂತಿಮ ನಿರ್ಧಾರವನ್ನು ಧೋನಿ ಅವರೇ ತೆಗೆದುಕೊಳ್ಳಲಿದ್ದಾರೆ,” ಎಂದು ತಿಳಿಸಿದ್ದಾರೆ. ಇನ್ನು ನಾಯಕ ರುತುರಾಜ್ ಗಾಯಕ್ವಾಡ್ ಕೂಡ ಧೋನಿ ಶೀಘ್ರದಲ್ಲೇ ಮೈದಾನಕ್ಕೆ ಮರಳಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಎಸ್‌ಕೆ ತಂಡಕ್ಕೆ ಧೋನಿ ಅನಿವಾರ್ಯ: ಪ್ರಸ್ತುತ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿರುವ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆಟಗಾರರ ಸರಣಿ ಗಾಯದ ಸಮಸ್ಯೆಯಿಂದ ಕಂಗೆಟ್ಟಿರುವ ತಂಡಕ್ಕೆ ಧೋನಿ ಅವರ ಅನುಭವ ಮತ್ತು ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ. ಇಂದಿನ ಪಂದ್ಯದಲ್ಲಿ ಮ್ಯಾಟ್ ಶಾರ್ಟ್ ಬದಲಿಗೆ ಧೋನಿ ಮತ್ತು ಮುಕೇಶ್ ಚೌಧರಿ ಬದಲಿಗೆ ಸ್ಪೆನ್ಸರ್ ಜಾನ್ಸನ್ ಆಡುವ ಸಾಧ್ಯತೆಯಿದೆ.

ಗುರುವಾರ ಸಂಜೆ ನಡೆಯಲಿರುವ ಈ ಪಂದ್ಯದಲ್ಲಿ ‘ತಲಾ’ ಮೈದಾನಕ್ಕಿಳಿದರೆ ಅದು ಚೆನ್ನೈ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular