ಮುಂಬೈ: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ, ಸಿಎಸ್‌ಕೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಎಂ.ಎಸ್. ಧೋನಿ ತಮ್ಮ ಪುಟ್ಟ ಅಭಿಮಾನಿಯೊಂದಿಗೆ ನಡೆಸಿದ ಸುಮಧುರ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲೇನಿದೆ?
ವೈರಲ್ ಆಗಿರೋ ಈ ವಿಡಿಯೋದಲ್ಲಿ ಏನಿದೆ ಗೊತ್ತಾ? ಒಬ್ಬ ಪುಟ್ಟ ಬಾಲಕ ಕೈಯಲ್ಲಿ ಪುಟ್ಟ ಬ್ಯಾಟ್ ಹಿಡಿದು ಧೋನಿ ಹತ್ತಿರ ಬರ್ತಾನೆ. ಧೋನಿ ಪಕ್ಕಾ ಜಂಟಲ್‌ಮ್ಯಾನ್ ತರಹ ಆ ಮಗುವಿನ ಜೊತೆ ಮಾತಾಡಿ, ಬ್ಯಾಟ್ ಮೇಲೆ ಆಟೋಗ್ರಾಫ್ ಹಾಕಿಕೊಡ್ತಾರೆ. ಅಷ್ಟೇ ಅಲ್ಲ, ಆ ಮಗು ಕೊಟ್ಟ ಫೋಟೋ ಫ್ರೇಮ್ ಅನ್ನು ಧೋನಿ ನಗುನಗುತ್ತಾ ಸ್ವೀಕರಿಸೋದು ನೋಡಿದ್ರೆ ಧೋನಿ ಯಾಕೆ ಎಲ್ಲರಿಗೂ ಇಷ್ಟ ಅನ್ನೋದು ಪಕ್ಕಾ ಆಗುತ್ತೆ
ಮಕ್ಕಳಂದ್ರೆ ಧೋನಿಗೆ ಪಂಚಪ್ರಾಣ
ನಮಗೆಲ್ಲಾ ಗೊತ್ತಿರೋ ಹಾಗೆ ಧೋನಿಗೆ ಮಕ್ಕಳ ಜೊತೆ ಆಟ ಆಡೋದು ಅಂದ್ರೆ ತುಂಬಾ ಇಷ್ಟ. ಮೊನ್ನೆ ತಾನೇ ಸರ್ಫರಾಜ್ ಖಾನ್ ಮಗನ ಜೊತೆ ಧೋನಿ ಆಟವಾಡಿದ ವಿಡಿಯೋ ಕೂಡ ವೈರಲ್ ಆಗಿತ್ತು. ಗ್ರೌಂಡ್‌ನಲ್ಲಿ ಎಷ್ಟೇ ಸೀರಿಯಸ್ ಆಗಿದ್ದರೂ, ಹೊರಗಡೆ ಧೋನಿ ಸದಾ ಸಿಂಪಲ್
ವಾಂಖೆಡೆಯಲ್ಲಿ ಧೋನಿ ದರ್ಬಾರ್?
ಇನ್ನು ಅಸಲಿ ವಿಷಯಕ್ಕೆ ಬರೋಣ. ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಅಭಿಮಾನಿಗಳಿಗೆ ಸ್ವಲ್ಪ ಬೇಸರವಾಗಿತ್ತು. ಇಂಜುರಿ ಕಾರಣದಿಂದ ಧೋನಿ ಮೊದಲ 6 ಮ್ಯಾಚ್ ಆಡಿರಲಿಲ್ಲ. ಆದರೆ ಈಗ ಬರ್ತಿರೋ ಲೇಟೆಸ್ಟ್ ಅಪ್ಡೇಟ್ ಅಂದ್ರೆ, ನಾಳೆ (ಏಪ್ರಿಲ್ 23) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯೋ MI vs CSK ಮ್ಯಾಚ್‌ನಲ್ಲಿ ಧೋನಿ ಆಡೋದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ

