HomeKarnatakaBIG NEWS: ಬೆನ್ನಿಗೆ ಕಟ್ಟಿಕೊಂಡು ಓಡಾಡಲು ನಾನು ರಾಕ್ ಲೈನ್ ಅಲ್ಲ ಎಂದ ಡಾ.ರವೀಂದ್ರ; ತೀಕ್ಷ್ಣವಾಗಿ...

BIG NEWS: ಬೆನ್ನಿಗೆ ಕಟ್ಟಿಕೊಂಡು ಓಡಾಡಲು ನಾನು ರಾಕ್ ಲೈನ್ ಅಲ್ಲ ಎಂದ ಡಾ.ರವೀಂದ್ರ; ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ

ಮಂಡ್ಯ: ಕಾಂಗ್ರೆಸ್ ನಾಯಕ ಹೆಚ್.ಎನ್.ರವೀಂದ್ರ ಸಂಸದೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ, ಎಲ್ಲವೂ ಲಿಮಿಟ್ ನಲ್ಲಿ ಇರಬೇಕು ಎಂದು ಗರಂ ಆಗಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದ ಹೆಚ್.ಎನ್.ರವೀಂದ್ರ, ಕಾಂಗ್ರೆಸ್ ಹಾಗೂ ಸಂಸದೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಗೆದ್ದರು, ನಟ ದರ್ಶನ್ ಕಾಲ್ ಮಾಡಿ ನಿಮ್ಮಿಂದ ಅಪ್ಪಾಜಿ ಗೌರವ ಉಳಿಯಿತು ಎಂದರು. ಸುಮಲತಾ ಕೂಡ ಕರೆ ಮಾಡಿ ಜನರೆಲ್ಲ ನಮ್ಮನ್ನು ಸ್ಟಾರ್ ಅಂತಾರೆ. ಎಲ್ಲಾ ಅಂಬರೀಶ್ ಅವರ ಅಭಿಮಾನಿಗಳು. ಆದರೆ ಇಂದು ಸ್ಟಾರ್ ಗಳೇ ನಿಮಗೆ ಅಭಿಮಾನಿಗಳಾಗಿದ್ದಾರೆ ಎಂದಿದ್ದರು. ನಾನು ಲಾಟರಿ ಹೊಡೆಯಿತು ಎಂದುಕೊಂಡೆ. ಆದರೆ ಬೆನ್ನಿಗೆ ಕಟ್ಟಿಕೊಂಡು ಓಡಾಡಲು ನಾನು ರಾಕ್ ಲೈನ್ ಅಲ್ಲ ಎಂದು ಹೇಳಿದ್ದರು.

ಡಾ.ಹೆಚ್.ಎನ್.ರವೀಂದ್ರ ಹೇಳಿಕೆಗೆ ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದು, ಎಲ್ಲವೂ ಲಿಮಿಟ್ ನಲ್ಲಿ ಇರಬೇಕು. ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಕರೆ ಮಾಡಿದ್ರು. ರಾಕ್ ಲೈನ್ ಗೆ ನಿರಂತರವಾಗಿ ಕರೆಮಾಡಿದ್ದೆಲ್ಲ ಗೊತ್ತಿದೆ. ಅವರ ಯೋಗ್ಯತೆ ಏನೆಂದು ಅರ್ಥಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular