ಸಾಮಾಜಿಕ ಜಾಲತಾಣ ಎಂದರೆ ಅದು ಅತ್ಯಂತ ವಿಲಕ್ಷಣ ಮತ್ತು ಉಲ್ಲಾಸದ ವಿಡಿಯೋಗಳನ್ನು ನೋಡುವ ಸ್ಥಳವಾಗಿದೆ. ದಿನವೂ ಚಿತ್ರ-ವಿಚಿತ್ರ ವಿಡಿಯೋಗಳನ್ನು ಅದರಲ್ಲಿ ಕಾಣಬಹುದು. ಅಂಥದ್ದೇ ಒಂದು ವಿಲಕ್ಷಣ ಜಾಹೀರಾತೀಗ ವೈರಲ್ ಆಗಿದೆ.
ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಹಲವು ಗಂಡುಮಕ್ಕಳು ಗೋಳಾಡುವುದು ಇದೆ. ವಧು-ವರರ ವೇದಿಕೆಯಲ್ಲಿ ಜಾಹೀರಾತು ಕೊಡುವುದು ಇದೆ. ಆದರೆ ಇಲ್ಲೊಬ್ಬ ಯುವಕ ಮಾತ್ರ ತನಗೆ ವಧು ಬೇಕು ಎನ್ನುವ ಪೋಸ್ಟರ್ ಹಿಡಿದು ಜನನಿಬಿಡ ಮಾರುಕಟ್ಟೆಯಲ್ಲಿ ಕಿಕ್ಕಿರಿದಿರುವ ಸಾರ್ವಜನಿಕರ ಮುಂದೆ ನಿಂತಿರುವ ವಿಡಿಯೋ ವೈರಲ್ ಆಗಿದೆ.
ಪೋಸ್ಟರ್ ಮೇಲಿನ ಬರಹ ವಿಶಿಷ್ಟವಾಗಿದೆ. “ನನಗೆ ಮದುವೆಗೆ ಸರ್ಕಾರಿ ಕೆಲಸವಿರುವ ಹುಡುಗಿ ಬೇಕು, ನಾನು ವಧು ದಕ್ಷಿಣೆ ಕೊಡುತ್ತೇನೆ” ಎಂದು ಬರೆದುಕೊಂಡಿದ್ದಾನೆ. ಈ ವಿಡಿಯೋ ಮಧ್ಯಪ್ರದೇಶದ ಛಿಂದ್‌ವಾರಾದ್ದಾಗಿದೆ.
ಹಲವರು ಇದನ್ನು ನೋಡಿ ನಗುತ್ತಿದ್ದರೆ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವಧುದಕ್ಷಿಣೆಯನ್ನು ನೀಡುವುದಾಗಿ ಹೇಳಿದ್ದರಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪತ್ನಿಗೆ ವಧು ದಕ್ಷಿಣೆ ಕೊಟ್ಟರೆ ವಾಪಸ್ ನಿನಗೇ ಸಿಗುತ್ತದೆ ಎನ್ನುವ ಪ್ಲ್ಯಾನಾ ಎಂದೂ ಕಾಲೆಳೆದಿದ್ದಾರೆ.
*शादी के लिये सरकारी नौकरी वाली लड़की चाहिये,दहेज़ मैं दे दूंगा*
*छिंदवाड़ा का एक युवक एक पोस्टर ले कर खड़ा हुआ मात्र 26 सेकंड का विडिओ जबरदस्त वायरल हो गया ।@BIbhopal #mens pic.twitter.com/LAyfyQ8xDy
— Sushant Peter (@SushantPeter302) January 25, 2023

