
ಸಂಜೀವಿನಿ ನಗರ ಪೊಲೀಸರು ಸಂತ್ರಸ್ತೆಯ ದೂರಿನ ಮೇರೆಗೆ ಮನೆಯ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಎಸ್ಪಿ ಸಂಜಯ್ ಅಗರವಾಲ್ ಮಾಹಿತಿ ನೀಡಿ, 32 ವರ್ಷದ ಮಹಿಳೆಯ ಪತಿ ಕೆಲವು ದಿನಗಳ ಹಿಂದೆ ನಿಧನರಾಗಿದ್ದಾರೆ. ಅದರ ನಂತರ ಮಹಿಳೆ ಬಾಡಿಗೆ ಮನೆಗಾಗಿ ಹುಡುಕುತ್ತಿದ್ದಳು. ಮನೆ ಹುಡುಕಾಟದ ಸಮಯದಲ್ಲಿ, ಸಂತ್ರಸ್ತೆ ತನ್ನ ಮೃತ ಪತಿಯ ಸ್ನೇಹಿತರ ಸಹಾಯ ಪಡೆದಿದ್ದಾಳೆ.
ಅವಕಾಶವನ್ನು ಬಳಸಿಕೊಂಡ ಮೂವರು ಆರೋಪಿಗಳು ಬಾಡಿಗೆಗೆ ಕೊಠಡಿ ತೋರಿಸುವ ನೆಪದಲ್ಲಿ ಮಹಿಳೆಯನ್ನು ಮನೆಗೆ ಕರೆದೊಯ್ದಿದ್ದಾರೆ. ಮದ್ಯ ಸೇವಿಸಿದ ಬಳಿಕ ಮೂವರು ಮಹಿಳೆಯ ಮೇಲೆ ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ. ಸದ್ಯ ಮಹಿಳೆಯ ದೂರಿನ ಮೇರೆಗೆ ಮೂವರು ಆರೋಪಿಗಳು ಹಾಗೂ ಮನೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

