HomeLatest NewsSHOCKING: ಕೆಮ್ಮಿನ ಸಿರಪ್ ಸೇವಿಸಿ ಕೋಮಾದಲ್ಲಿದ್ದ 4 ವರ್ಷದ ಮಗು ಸಾವು

SHOCKING: ಕೆಮ್ಮಿನ ಸಿರಪ್ ಸೇವಿಸಿ ಕೋಮಾದಲ್ಲಿದ್ದ 4 ವರ್ಷದ ಮಗು ಸಾವು

ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ಕೆಮ್ಮಿನ ಸಿರಪ್ ನ ಮತ್ತೊಂದು ಸಾವು ಸಂಭವಿಸಿದೆ. ಏಮ್ಸ್‌ನಲ್ಲಿ ಕೋಮಾದಲ್ಲಿದ್ದ 4 ವರ್ಷದ ಮಗು ನಾಗ್ಪುರದಲ್ಲಿ ತಿಂಗಳುಗಳ ನಂತರ ಮೃತಪಟ್ಟಿದೆ.

ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿದ ನಂತರ ತೀವ್ರ ಅಸ್ವಸ್ಥಗೊಂಡು ಕೋಮಾಕ್ಕೆ ಜಾರಿದ ನಾಲ್ಕು ವರ್ಷದ ಬಾಲಕ ಏಮ್ಸ್-ನಾಗ್ಪುರದಲ್ಲಿ ತಿಂಗಳುಗಳ ನಂತರ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಅಧಿಕಾರಿಯ ಪ್ರಕಾರ, ಚಿಂದ್ವಾರ ಜಿಲ್ಲೆಯ ಗಡಿಯಲ್ಲಿರುವ ಬೆತುಲ್ ಜಿಲ್ಲೆಯ ಟಿಕಾಬರಿ ಗ್ರಾಮದ ಹರ್ಷ್ ನಾಲ್ಕು ತಿಂಗಳಿಗಿಂತ ಹೆಚ್ಚು ಕಾಲ ಕೋಮಾದಲ್ಲಿದ್ದ ಮತ್ತು ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಾಗಿದ್ದರು, ಆದರೆ ಭಾನುವಾರ ರಾತ್ರಿ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೇತಲ್ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ(ಸಿಎಂಎಚ್‌ಒ) ಡಾ. ಮನೋಜ್ ಹುರ್ಮಡೆ ಮಗುವಿನ ಸಾವನ್ನು ದೃಢಪಡಿಸಿದ್ದಾರೆ. ಸೋಮವಾರ ನಾಗ್ಪುರದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular