HomeEntertainmentಚಿತ್ರಪ್ರೇಮಿಗಳ ಗಮನ ಸೆಳೆದ 'ಪಿಚ್ಚರ್' ಸಿನಿಮಾದ ಮೂರನೇ ಹಾಡು: ಜ್ಯಾಸಿ ಗಿಫ್ಟ್ ಗಾಯನಕ್ಕೆ ಫ್ಯಾನ್ಸ್ ಫಿದಾ

ಚಿತ್ರಪ್ರೇಮಿಗಳ ಗಮನ ಸೆಳೆದ ‘ಪಿಚ್ಚರ್’ ಸಿನಿಮಾದ ಮೂರನೇ ಹಾಡು: ಜ್ಯಾಸಿ ಗಿಫ್ಟ್ ಗಾಯನಕ್ಕೆ ಫ್ಯಾನ್ಸ್ ಫಿದಾ

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ‘ಪಿಚ್ಚರ್’ ಕನ್ನಡ ಸಿನಿಮಾದ ಮೂರನೇ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದೆ. ಗೋಲ್ಡನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಖ್ಯಾತ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಸದ್ಯ ಹೊರಬಂದಿರುವ ‘ಹುಣ್ಣಿಮೆ ಚಂದಿರ’ ಎಂಬ ವಿಡಿಯೋ ಸಾಂಗ್ ಪ್ರೇಕ್ಷಕರ ಮನ ಗೆಲ್ಲುತ್ತಿದೆ.

ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಹಾಡಿಗೆ ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಿರ್ದೇಶಕ ಸುನಿ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಜ್ಯಾಸಿ ಗಿಫ್ಟ್ ತಮ್ಮ ವಿಶಿಷ್ಟ ಕಂಠದಲ್ಲಿ ಈ ಗೀತೆಯನ್ನು ಹಾಡಿದ್ದು, ಸ್ಯಾಮ್ಯುಯೆಲ್ ಅಬಿ ಅವರ ಸಂಗೀತ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತ ಈ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ.

ಸಂದೀಪ ಬೇಡ್ರ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ್ ಮತ್ತು ಅಮೃತಾ ಸುಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಕರಾವಳಿಯ ಜನಪ್ರಿಯ ಹಾಸ್ಯ ನಟರಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್ ಹಾಗೂ ಭೋಜರಾಜ್ ವಾಮಂಜೂರ್ ಸೇರಿದಂತೆ ಹಲವು ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಸಂತೋಷ್ ರೈ ಪತಾಜೆ ಮತ್ತು ಚಂದ್ರಶೇಖರ್ ಕೆ ಎಸ್ ಅವರ ಛಾಯಾಗ್ರಹಣವಿದ್ದು, ರಾಜು ಆರ್ಯನ್ ಅವರ ಸಂಕಲನ ಕಾರ್ಯ ಈ ಚಿತ್ರಕ್ಕಿದೆ. ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಕೊಂಡಿರುವ ‘ಪಿಚ್ಚರ್’ ಸಿನಿಮಾ ಜುಲೈ ಇಪ್ಪತ್ತನಾಲ್ಕರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular