HomeLatest NewsBREAKING : ಜಗತ್ತಿನ ‘ರಿಯಲ್ ಸ್ಪೈಡರ್ ಮ್ಯಾನ್’ ಅಲ್ ಖಾಖಾ ಇನ್ನಿಲ್ಲ |WATCH VIDEO

BREAKING : ಜಗತ್ತಿನ ‘ರಿಯಲ್ ಸ್ಪೈಡರ್ ಮ್ಯಾನ್’ ಅಲ್ ಖಾಖಾ ಇನ್ನಿಲ್ಲ |WATCH VIDEO

ಜಗತ್ತಿನಾದ್ಯಂತ ‘ರಿಯಲ್ ಸ್ಪೈಡರ್ ಮ್ಯಾನ್’ ಎಂದು ಖ್ಯಾತಿ ಪಡೆದಿದ್ದ ಸಾಹಸಿ ಪರ್ವತಾರೋಹಕ ಅಲ್ ಖಾಖಾ ಅವರು ಯೆಮೆನ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ನೇರವಾದ ಬೆಟ್ಟಗಳನ್ನು ಏರುವ ಮೂಲಕ ಜನಪ್ರಿಯರಾಗಿದ್ದ ಅವರು, ಬಿಸಿನೀರಿನ ಬುಗ್ಗೆಗಳ ಸಮೀಪ ಸಾಹಸ ಪ್ರದರ್ಶಿಸುವ ವೇಳೆ ಕಾಲು ಜಾರಿ ಆಳವಾದ ಬಿಸಿನೀರಿನ ಕುಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಹೌದು. ಜಗತ್ತಿನಾದ್ಯಂತ ‘ರಿಯಲ್ ಸ್ಪೈಡರ್ ಮ್ಯಾನ್’ ಎಂದು ಖ್ಯಾತಿ ಪಡೆದಿದ್ದ ಅಲ್ ಖಾಖಾ ಅವರು ನಿಧನರಾಗಿದ್ದಾರೆ. ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ನೇರವಾದ ಹಾಗೂ ಕಡಿದಾದ ಬೆಟ್ಟಗಳನ್ನು ಏರುವ ಸಾಹಸದಿಂದ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು.

ಯೆಮೆನ್‌ನ Damt ಪ್ರದೇಶದಲ್ಲಿರುವ ಜ್ವಾಲಾಮುಖಿ ಮೂಲದ ಬಿಸಿನೀರಿನ ಬುಗ್ಗೆಗಳ ಬಳಿ ಸಂಭವಿಸಿದ ದುರ್ಘಟನೆಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರು ಆಗಾಗ ಬಿಸಿನೀರಿನ ಬುಗ್ಗೆಗಳ ಸುತ್ತಮುತ್ತಲಿರುವ ನೇರವಾದ ಬೆಟ್ಟಗಳನ್ನು ಏರಿ ಸಾಹಸ ಪ್ರದರ್ಶನ ಮಾಡುತ್ತಿದ್ದರು. ಇತ್ತೀಚೆಗೆ ಇದೇ ರೀತಿಯ ಸಾಹಸ ಪ್ರದರ್ಶನದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಆಳವಾದ ಬಿಸಿನೀರಿನ ಕುಂಡಕ್ಕೆ ಬಿದ್ದಿದ್ದಾರೆ.

ಕುಂಡದ ನೀರಿನ ಉಷ್ಣಾಂಶ ತುಂಬಾ ಹೆಚ್ಚಿದ್ದಲ್ಲದೆ, ಅದರ ಆಳವೂ ಅಧಿಕವಾಗಿದ್ದರಿಂದ ಇದುವರೆಗೆ ಅವರ ಮೃತದೇಹವನ್ನು ಹೊರತೆಗೆಯಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ಈ ಘಟನೆ ಯೆಮೆನ್‌ನಲ್ಲಿ ತೀವ್ರ ವಿಷಾದಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular