ಬೆಂಗಳೂರು: ಹೆತ್ತ ತಾಯಿಯೇ ಮಗಳನ್ನು ನೇಣು ಬಿಗಿದು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
6 ವರ್ಷದ ಮಗಳು ಕೃತ್ತಿಕಾ ಮೃತಪಟ್ಟಿದ್ದು, ತಾಯಿ ನಿರುತಾ (31) ಸ್ಥಿತಿ ಗಂಭೀರವಾಗಿದೆ. ನೇಪಾಳ ಮೂಲದ ನಿರುತಾ ಹಾಗೂ ಕಿಶನ್ ದಂಪತಿ ಹೆಣ್ಣೂರು ಬಳಿ ವಾಸವಾಗಿದ್ದರು. ಪತಿ ಕಿಶನ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಪತ್ನಿ ನಿರುತಾಅ ಸದಾಕಾಲ ಫೋನ್ ನಲ್ಲಿ ಬ್ಯುಸಿ ಇರುತ್ತಿದ್ದಳು. ಕಿಶನ್ ಗೆ ಪತ್ನಿ ಮೇಲೆ ಅನಿಅತಿಕ ಸಂಬಂಧದ ಬಗ್ಗೆ ಶಂಕೆ ಹಿನ್ನೆಲೆಯಲ್ಲಿ ಗಲಾಟೆ ಮಾಡುತ್ತಿದ್ದ.
ಪತ್ನಿ-ಪತ್ನಿ ನಡುವೆ ಜೋರು ಗಲಾಟೆಯಾಗಿದೆ. ಜನವರಿ 5ರಂದು ಕಿಶನ್ ಕೆಲಸಕ್ಕೆ ಹೋಗಿದ್ದ. ಮನೆಗೆ ಬರುವಷ್ಟರಲ್ಲಿ ಮಗಳು ಕೃತ್ತಿಕಾಗೆ ನೇಣು ಬಿಗಿದು ಸಾಯಿಸಿದ್ದ ನಿರುತಾ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ನಿರುತಾ ಸ್ಥಿತಿ ಕೂಡ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

