HomeLatest NewsBIG NEWS: ತರಕಾರಿ ತರಲೆಂದು ಹೋಗಿದ್ದ ತಾಯಿ-ಮಗಳು: ಭೀಕರ ಭೈಕ್ ಅಪಘಾತದಲ್ಲಿ ಸಾವು

BIG NEWS: ತರಕಾರಿ ತರಲೆಂದು ಹೋಗಿದ್ದ ತಾಯಿ-ಮಗಳು: ಭೀಕರ ಭೈಕ್ ಅಪಘಾತದಲ್ಲಿ ಸಾವು

ಛತ್ತೀಸಗಢ: ತರಕಾರಿ ತರಲೆಂದು ತಾಯಿ-ಮಗಳು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ಕೋರ್ಬಾ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ್ ಅಕೊಹಾಡಿಯಾ ವಾರ್ಡ್ ನಿವಾಸಿ ರಾಮ್ ಕುಮಾರಿ ವರ್ಮಾ, ತನ್ನ ಮಗಳು ರೇಣು ವರ್ಮಾ ಜೊತೆ ಮಾರುಕಟ್ಟೆಗೆ ತೆರಳಿ ತರಕಾರಿ ಖರೀದಿಸಿ ಮನೆಗೆ ವಾಪಾಸ್ ಆಗುತ್ತಿದ್ದರು. ವೇಗವಾಗಿ ಬಂದ ಬೈಕ್ ಸವಾರನೊಬ್ಬ ತಾಯಿ-ಮಗಳು ತೆರಳುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ.

ನಿಯಂತ್ರಣ ಕಳೆದುಕೊಂಡು ತಾಯಿ-ಮಗಳು ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಾರೆ. ಹ್ಗೆ ಬಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್ ಹರಿದು ಹೋಗಿದ್ದು, ತಾಯಿ-ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular