HomeLatest NewsBREAKING NEWS: ಅಣ್ಣ-ತಮ್ಮನ ಜಗಳ ಬಿಡಿಸಲು ಬಂದಿದ್ದ ತಾಯಿಯನ್ನೇ ಹತ್ಯೆಗೈದ ಮಕ್ಕಳು!

BREAKING NEWS: ಅಣ್ಣ-ತಮ್ಮನ ಜಗಳ ಬಿಡಿಸಲು ಬಂದಿದ್ದ ತಾಯಿಯನ್ನೇ ಹತ್ಯೆಗೈದ ಮಕ್ಕಳು!

ಹುಬ್ಬಳ್ಳಿ: ಅಣ್ಣ-ತಮ್ಮನ ಜಗಳ ಬಿಡಿಸಲು ಹೋಗಿದ್ದ ತಾಯಿಯನ್ನೇ ಮಕ್ಕಳು ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಪದ್ಮಾ (46) ಮೃತ ಮಹಿಳೆ. ಹುಬ್ಬಳ್ಳಿ ತಾಲೂಕಿನ ತೊರವಿ ಹಕ್ಕಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕಟಿಂಗ್ ಶಾಪ್ ಇಟ್ಟಿಕೊಂಡು ಸಹೋದರರಾದ ಮಂಜುನಾಥ್ ಹಾಗೂ ಲಕ್ಷ್ಮನ ಜೀವನ ನಡೆಸುತ್ತಿದ್ದರು. ಕಟಿಂಗ್ ಶಾಪ್ ನಲ್ಲಿ ಬಂದ ಹಣದ ಹಂಚಿಕೆ ವಿಚಾರವಾಗಿ ಅಣ್ಣ-ತಮ್ಮನ ನಡುವೆ ಜಗಳ ಶುರುವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ತಾಯಿ ಪದ್ಮಾ ಇಬ್ಬರ ನಡುವಿನ ಜಗಳ ಬಿಡಿಸಲೆಂದು ಬಂದಿದ್ದಾರೆ. ಕೋಪದ ಬರದಲ್ಲಿ ಮಂಜುನಾಥ್, ಕಿಟಕಿಯ ಗಾಜಿನಿಂದ ತಾಯಿ ಪದ್ಮಾ ಹೊಟ್ಟೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಪದ್ಮಾ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪದ್ಮಾ ಸಾವನ್ನಪ್ಪಿದ್ದಾರೆ.

ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಮಹಿಳೆ ಮಕ್ಕಳಾದ ಮಂಜುನಾಥ್ ಹಾಗೂ ಲಕ್ಷ್ಮಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular