HomeLatest NewsBREAKING: ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ಐವರು ಬಾಲಕಿಯರು ಪತ್ತೆ

BREAKING: ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ಐವರು ಬಾಲಕಿಯರು ಪತ್ತೆ

ಚಿಕ್ಕಬಳ್ಳಾಪುರ: ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ಐವರು ಬಾಲಕಿಯರು ಪತ್ತೆಯಾಗಿದ್ದು, ಹಾಸ್ಟೆಲ್ ವಾರ್ಡನ್ ಕಿರುಕುಳ ನೀಡುತ್ತಿರುವುದಾಗಿ ಬಾಲಕಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

ವಾರ್ಡನ್ ಶ್ವೇತಾ ನಮ್ಮನ್ನು ರೂಮಿನಲ್ಲಿ ಕೂಡಿಹಾಕಿ ಸುಖಾಸುಮ್ಮನೇ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಹಾಸ್ಟೆಲ್ ನಲ್ಲಿ ಇರಲು ಇಷ್ಟವಿಲ್ಲದೇ ಹೊರ ಬಂದಿದ್ದಾಗಿ ಬಾಲಕಿಯರು ತಿಳಿಸಿದ್ದಾರೆ. ಸಂಬಂಧಿಕರ ಮನೆಗೆ ಹೋಗಲೆಂದು ಹಾಸ್ಟೆಲ್ ನಿಂದ ಬಂದಿದ್ದೆವು ಎಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಬಾಲಕಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

ನಮ್ಮನ್ನು ತಂದೆ-ತಾಯಿ ಅಥವಾ ಸಂಬಂಧಿಕರ ಮನೆಗೆ ಕಳುಹಿಸಿಕೊಡಿ. ಹಾಸ್ಟೆಲ್ ಗೆ ಕಲುಹಿಸಬೇಡಿ ಎಂದು ಬಾಲಕಿಯರು ಪೊಲೀಸರ ಬಳಿ ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಬಳಿ ಇರುವ ಮದರ್ ತೆರೇಸಾಚಾರಿಟೇಬಲ್ ಟ್ರಸ್ಟ್ ನಡೆಸುತ್ತಿದ್ದ ಮಕ್ಕಳ ಆಸರೆ ಬಾಲಮಂದಿರ ಹಾಸ್ಟೆಲ್ ನಿಂದ ಐವರು ಬಾಲಕಿಯರು ಏಕಾಏಕಿ ನಾಪತ್ತೆಯಾಗಿದ್ದರು. ಈ ಬಗ್ಗೆ ಚ್ಚಾರಿಟೇಬಲ್ ಟ್ರಸ್ಟ್ ನವರು ಚಿಕ್ಕಮಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಬಾಲಕಿಯರು ಪತ್ತೆಯಾಗಿದ್ದು, ಹಾಸ್ಟೆಲ್ ವಾರ್ಡನ್ ಕಿರುಕುಳಕ್ಕೆ ನೊಂದು ಹೊರಬಂದಿದ್ದಾಗಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular