HomeKarnatakaಹೆತ್ತ ತಾಯಿಯನ್ನೇ ಕೊಂದು ಸಹೋದರಿಯರಿಗೆ ಕರೆ ಮಾಡಿ ಹೇಳಿದ ಪಾಪಿ ಮಗ

ಹೆತ್ತ ತಾಯಿಯನ್ನೇ ಕೊಂದು ಸಹೋದರಿಯರಿಗೆ ಕರೆ ಮಾಡಿ ಹೇಳಿದ ಪಾಪಿ ಮಗ

ಗದಗ: ಬುದ್ಧಿ ಹೇಳಿದ್ದಕ್ಕೆ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆಗೈದಿರುವ ಘೋರ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ನಡೆದಿದೆ.

ಶಾರದಮ್ಮ ಅಗಡಿ (85) ಕೊಲೆಯಾದ ಮಹಿಳೆ. ಮಾನಸಿಕ ಅಸ್ವಸ್ಥ ಮಗ ಸಿದ್ಧಲಿಂಗ ಎಂಬಾತ ತಾಯಿಯನ್ನೇ ಕೊಂದು ಸಹೋದರಿಯರಿಗೆ ಕರೆ ಮಾಡಿ ಹೇಳಿದ್ದಾನೆ.

ಸಿದ್ಧಲಿಂಗ ಪಕ್ಕದ ಮನೆಯವರ ಜೊತೆ ಜಗಳವಾಡಿದ್ದ. ಈ ವೇಳೆ ಮಗ ಮಾನಸಿಕ ಅಸ್ವಸ್ಥ ಆತನನ್ನು ಬಿಟ್ಟುಬಿಡಿ ಎಂದು ಜಗಳ ಬಿಡಿಸಿದ್ದ ತಾಯಿ, ಮಗನನ್ನು ಕರೆದು ಬುದ್ಧಿ ಹೇಳಿದ್ದರು. ಇದಕ್ಕೆ ತಾಯಿ ಮಲಗಿದ್ದ ವೇಳೆ ಆಕೆಯನ್ನು ಹತ್ಯೆಗೈದ ಸಿದ್ಧಲಿಂಗ ಬಳಿಕ ಸಹೋದರಿಯರಿಗೆ ಕರೆ ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಯಿ ಸತ್ತು ಹೋಗಿದ್ದಾರೆ ಎಂದು ಹೇಳಿದ್ದಾನೆ. ಆದರೆ ಸಹೋದರನ ಬುದ್ಧಿ ಸರಿಯಿಲ್ಲ ಎಂದು ನಂಬದ ಸಹೋದರಿಯರು ನಿರ್ಲಕ್ಷ್ಯ ಮಾಡಿ ಸುಮ್ಮನಾಗಿದ್ದಾರೆ. ವಿಷಯ ತಿಳಿದು ನೆರೆಮನೆಯವರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಗದಗ ಶಹರ ಠಾಣೆ ಪೊಲೀಸರು ಪರಿಶೀಲಿಸಿದಾಗ ಮಹಿಳೆ ಸಾವನ್ನಪ್ಪಿರುವುದು ದೃಢವಾಗಿದೆ. ಬಳಿಕ ಸಹೋದರಿಯರಿಗೆ ಪೊಲೀಸರೇ ವಿಷಯ ಹೇಳುತ್ತಿದ್ದಂತೆ ಶಾಕ್ ಆಗಿ ಓಡೋಡಿ ಬಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular