ಬೆಂಗಳೂರು: ಅಪ್ರಾಪ್ತ ಮಗಳು ಪ್ರಿಯಕರ ಹಾಗೂ ಆತನ ಸ್ನೇಹಿತನ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಲೆಗೈದಿರುವ ದಾರುಣ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.
ನೇತ್ರಾವತಿ (34) ಕೊಲೆಯಾದ ಮಹಿಳೆ. ಕೆಲದಿನಗಳ ಹಿಂದೆ ಮಗಳು ತನ್ನ ಪ್ರಿಯಕರ ಹಾಗೂ ಸ್ನೇಹಿತನೊಂದಿಗೆ ಬಂದು ಮನೆಯಲ್ಲಿ ಗಲಾಟೆ ಮಾಡಿದ್ದಳು. ಗಲಾಟೆಯ ವೇಳೆ ಮಗಳು ಹಾಗೂ ಆಕೆಯ ಪ್ರಿಯಕರ ಟವೆಲ್ ನಿಂದ ನೇತ್ರಾವತಿಯ ಬಾಯಿ ಕಟ್ಟಿದ್ದರು. ಈ ವೇಳೆ ನೇತ್ರಾವತು ಅಸ್ವಸ್ಥಳಾಗಿ ಸಾವನ್ನಪ್ಪಿದ್ದಾರೆ. ತಾಯಿ ಸಾವನ್ನಪ್ಪುತ್ತಿದ್ದಂತೆ ಮಗಳು ಮನೆಗೆ ಲಾಕ್ ಮಾಡಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರೊಂದಿಗೆ ಪರಾರಿಯಾಗಿದ್ದಳು.
ಹೀಗೆ ನಾಪತ್ತೆಯಾಗಿದ್ದ ಅಪ್ರಾಪ್ತರ ಗ್ಯಾಂಗ್ ನ ಯುವತಿ ತಾಯಿ ನಾಪತ್ತೆ ದೂರು ನೀಡಿದ್ದಳು. ಕೊಲೆಗೈದು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ ಬೆನ್ನಲ್ಲೇ ಅವರೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ನೇತ್ರಾವತಿಯನ್ನು ಹತ್ಯೆಗೈದಿದ್ದ ಮಗಳು, ಆಕೆಯ ಪ್ರಿಯಕರ ಹಾಗೂ ಮೂವರು ಸ್ನೇಹಿತರು ಸೇರಿ ಐವರನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 
			 
		 
		 
		 
		 Loading ...
 Loading ... 
		 
		