ನಾವು ಏನನ್ನು ತಿನ್ನುತ್ತೇವೆಯೋ ಅದೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಅದರಲ್ಲೂ ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಇಲ್ಲದೆ ಒಗ್ಗರಣೆ ಬೀಳುವುದೇ ಇಲ್ಲ. ಆದರೆ ರುಚಿಗಾಗಿ ನಾವು ಬಳಸುವ ಎಣ್ಣೆ ಹಿತವಾಗಿದ್ದರೆ ಮಾತ್ರ ಆರೋಗ್ಯ, ಮಿತಿಯಿಲ್ಲದಿದ್ದರೆ ಅದುವೇ ಮಾರಕ. ರುಚಿಗಿಂತ ಆರೋಗ್ಯ ಮುಖ್ಯ ಎಂಬ ಮಾತು ಇಂದಿನ ಕಾಲಕ್ಕೆ ಅನ್ವರ್ಥವಾಗಿದೆ.
ಮಾಂಸಾಹಾರವೇ ಇರಲಿ ಘಮಘಮಿಸುವ ಬಿರಿಯಾನಿಯೇ ಇರಲಿ ಅಥವಾ ಬಾಯಿಯಲ್ಲಿ ನೀರೂರಿಸುವ ಸಿಹಿತಿಂಡಿಯೇ ಇರಲಿ ಎಣ್ಣೆ ಇಲ್ಲದೆ ಭಾರತೀಯ ಅಡುಗೆ ಪೂರ್ಣವಾಗದು. ಆದರೆ ನಾಲಿಗೆಯ ರುಚಿಗೆ ದಾಸರಾಗಿ ನಾವು ಬಳಸುವ ಅತಿಯಾದ ಎಣ್ಣೆ ನಮ್ಮ ಹೃದಯವನ್ನೇ ನಿಲ್ಲಿಸುವ ಶಕ್ತಿ ಹೊಂದಿದೆ ಎಂಬುದು ನಿಮಗೆ ಗೊತ್ತೇ?ನಿಮ್ಮ ಮನೆಯಲ್ಲಿ ನಾಲ್ಕು ಜನರಿದ್ದರೆ ತಿಂಗಳಿಗೆ ಎಷ್ಟು ಲೀಟರ್ ಎಣ್ಣೆ ಬಳಸಬೇಕು? ಇಲ್ಲಿದೆ ಆರೋಗ್ಯ ತಜ್ಞರು ನೀಡುವ ಕಂಪ್ಲೀಟ್ ಗೈಡ್.
ಅಗತ್ಯಕ್ಕಿಂತ ಹೆಚ್ಚು ಎಣ್ಣೆ ಬಳಸುವುದರಿಂದ ಕೇವಲ ಬೊಜ್ಜು ಬರುವುದು ಮಾತ್ರವಲ್ಲ, ಅದು ನಿಮ್ಮ ರಕ್ತನಾಳಗಳಲ್ಲಿ ಕೊಬ್ಬಿನಂಶವಾಗಿ ಶೇಖರಣೆಯಾಗುತ್ತದೆ. ಇದು ನೇರವಾಗಿ ಹೃದಯದ ಮೇಲೆ ಒತ್ತಡ ಹೇರಿ ಹೃದಯಾಘಾತಕ್ಕೆ ದಾರಿ ಮಾಡಿಕೊಡುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಗೆ ತಿಂಗಳಿಗೆ ಬೇಕಾಗುವ ಎಣ್ಣೆಯ ಪ್ರಮಾಣ ಎಷ್ಟು ಎಂಬ ನಿಖರ ಮಾಹಿತಿ ಇಲ್ಲಿದೆ:
ಒಬ್ಬ ವ್ಯಕ್ತಿಗೆ: ತಿಂಗಳಿಗೆ ಕೇವಲ ಅರ್ಧ ಲೀಟರ್ ಎಣ್ಣೆ ಸಾಕು.
ದೈನಂದಿನ ಮಿತಿ: ದಿನಕ್ಕೆ 2 ರಿಂದ 3 ಚಮಚಕ್ಕಿಂತ ಹೆಚ್ಚು ಎಣ್ಣೆ ಸೇವಿಸಬಾರದು.
ನಾಲ್ಕು ಜನರ ಕುಟುಂಬಕ್ಕೆ: ತಿಂಗಳಿಗೆ ಗರಿಷ್ಠ 2 ಲೀಟರ್ ಎಣ್ಣೆ ಮಾತ್ರ ಬಳಸಬೇಕು.
ಒಂದು ವೇಳೆ ನಿಮ್ಮ ಮನೆಯಲ್ಲಿ ತಿಂಗಳಿಗೆ 2 ಲೀಟರ್‌ಗಿಂತ ಹೆಚ್ಚು ಎಣ್ಣೆ ಖಾಲಿಯಾಗುತ್ತಿದ್ದರೆ, ನೀವು ತಿಳಿಯದೆಯೇ ನಿಮ್ಮ ಕುಟುಂಬವನ್ನು ಅನಾರೋಗ್ಯದ ಕೂಪಕ್ಕೆ ದೂಡುತ್ತಿದ್ದೀರಿ ಎಂದೇ ಅರ್ಥ.
ಯಾವ ಎಣ್ಣೆ ಬೆಸ್ಟ್? ಇಲ್ಲಿದೆ ಪಟ್ಟಿ
ಎಲ್ಲಾ ಎಣ್ಣೆಗಳು ಒಂದೇ ರೀತಿಯಲ್ಲ. ನಿಮ್ಮ ಹೃದಯಕ್ಕೆ ಹಿತ ನೀಡುವ ಎಣ್ಣೆಯನ್ನು ಆರಿಸಿಕೊಳ್ಳಿ:
ಆಲಿವ್ ಎಣ್ಣೆ: ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇದು ನಂಬರ್ 1.
ಸೂರ್ಯಕಾಂತಿ ಮತ್ತು ಎಳ್ಳು ಎಣ್ಣೆ: ಇದರಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿವೆ.
ಕ್ಯಾನೋಲಾ ಮತ್ತು ಸೋಯಾಬೀನ್ ಎಣ್ಣೆ: ಇವು ಹೃದಯದ ಆರೋಗ್ಯಕ್ಕೆ ಪೂರಕವಾದ ಕೊಬ್ಬನ್ನು ಹೊಂದಿವೆ.
ಅಡುಗೆ ಮನೆಯಲ್ಲಿ ಹೀಗೆ ಬದಲಾವಣೆ ಮಾಡಿ
ಆರೋಗ್ಯವಂತ ಜೀವನ ನಿಮ್ಮದಾಗಬೇಕೆಂದರೆ ನಿಮ್ಮ ಅಡುಗೆ ಶೈಲಿ ಬದಲಾಗಲಿ:
ಆಹಾರವನ್ನು ಎಣ್ಣೆಯಲ್ಲಿ ಹುರಿಯುವ ಬದಲು ಆವಿಯಲ್ಲಿ ಬೇಯಿಸುವುದನ್ನು (ಉದಾಹರಣೆಗೆ ಇಡ್ಲಿ, ಕಡುಬು) ರೂಢಿಸಿಕೊಳ್ಳಿ.
ಎಣ್ಣೆಯನ್ನು ಸುರಿಯುವ ಬದಲು ಅಳತೆ ಚಮಚ ಬಳಸಿ ಅಡುಗೆಗೆ ಹಾಕಿ.
ಹಸಿ ತರಕಾರಿ ಹಾಗೂ ಬೇಯಿಸಿದ ಪದಾರ್ಥಗಳಿಗೆ ಹೆಚ್ಚು ಆದ್ಯತೆ ನೀಡಿ

