ಬೆಂಗಳೂರು: ಸಾರ್ವಜನಿಕರಿಂದ ಅಳತೆಗಾಗಿ ಮೋಜಣಿ ವ್ಯವಸ್ಥೆಯಡಿ ಸ್ವೀಕರಿಸುವ ವಿವಿಧ ರೀತಿಯ ಅರ್ಜಿಗಳ ಶುಲ್ಕ ಹಾಗೂ ಪರವಾನಗಿ ಭೂಮಾಪಕರ ಸೇವಾ ಶುಲ್ಕವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ಪರಿಷ್ಕೃತ ದರಗಳು 2026ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಮೋಜಿಣಿ ಸೇವೆ ಪಡೆಯುವ ಸಾರ್ವಜನಿಕರಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೋಜಿಣಿ, 11ಎ, ಅಲಿನೇಷನ್ ಪೂರ್ವ ನಕ್ಷೆ, ತತ್ಕಾಲ್ ಪೋಡಿ ಹಾಗೂ ಹದ್ದುಬಸ್ತು ಸೇರಿದಂತೆ ವಿವಿಧ ಭೂಮಾಪನ ಅರ್ಜಿಗಳ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಪರವಾನಗಿ ಭೂಮಾಪಕರ ಸೇವಾ ಸಂಭಾವನೆಯನ್ನೂ ಹೆಚ್ಚಿಸಲಾಗಿದೆ. ಪರಿಷ್ಕೃತ ಶುಲ್ಕಗಳು 2026ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಸರ್ಕಾರದ ಕಂಇ 170 ಎಸ್‌ಎಸ್‌ಸಿ 2026 ಸಂಖ್ಯೆಯ ಆದೇಶವನ್ನು ಸೆಪ್ಟೆಂಬರ್ 19, 2026ರಂದು ಹೊರಡಿಸಲಾಗಿದೆ. ಈಗಾಗಲೇ ಅಳತೆಗಾಗಿ ಸ್ವೀಕೃತವಾಗಿ ಬಾಕಿ ಇರುವ ಪ್ರಕರಣಗಳಿಗೆ ಈ ಪರಿಷ್ಕೃತ ದರಗಳು ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅರ್ಜಿ ಶುಲ್ಕ ಎಷ್ಟು?
11ಎ, ಅಲಿನೇಷನ್ ಪೂರ್ವ ನಕ್ಷೆ, ತತ್ಕಾಲ್ ಪೋಡಿ ಅರ್ಜಿಗಳಿಗೆ:
-
ನಗರ ಪ್ರದೇಶ: 2 ಎಕರೆವರೆಗೆ ₹3,200
-
ನಗರ ಪ್ರದೇಶ: 2 ಎಕರೆಗಿಂತ ಹೆಚ್ಚಾದರೆ ಪ್ರತಿ ಎಕರೆಗೆ/ಭಾಗಶಃ ಎಕರೆಗೆ ₹1,000
-
ಗ್ರಾಮೀಣ ಪ್ರದೇಶ: 2 ಎಕರೆವರೆಗೆ ₹2,300
-
ಗ್ರಾಮೀಣ ಪ್ರದೇಶ: 2 ಎಕರೆಗಿಂತ ಹೆಚ್ಚಾದರೆ ಪ್ರತಿ ಎಕರೆಗೆ/ಭಾಗಶಃ ಎಕರೆಗೆ ₹400
ಹದ್ದುಬಸ್ತು ಅರ್ಜಿಗಳಿಗೆ:
-
ನಗರ ಪ್ರದೇಶ: 2 ಎಕರೆವರೆಗೆ ₹2,500
-
ನಗರ ಪ್ರದೇಶ: 2 ಎಕರೆಗಿಂತ ಹೆಚ್ಚಾದರೆ ಪ್ರತಿ ಎಕರೆಗೆ/ಭಾಗಶಃ ಎಕರೆಗೆ ₹400
-
ಗ್ರಾಮೀಣ ಪ್ರದೇಶ: 2 ಎಕರೆವರೆಗೆ ₹1,000
-
ಗ್ರಾಮೀಣ ಪ್ರದೇಶ: 2 ಎಕರೆಗಿಂತ ಹೆಚ್ಚಾದರೆ ಪ್ರತಿ ಎಕರೆಗೆ/ಭಾಗಶಃ ಎಕರೆಗೆ ₹300
ಇದರ ಜೊತೆಗೆ ನೋಟಿಸ್ ಶುಲ್ಕವಾಗಿ ಪ್ರತಿ ಬಾಜುದಾರರಿಗೆ ₹25 ನಿಗದಿಪಡಿಸಲಾಗಿದೆ.
ಪರವಾನಗಿ ಭೂಮಾಪಕರ ಸೇವಾ ಶುಲ್ಕವೂ ಹೆಚ್ಚಳ
ಅಳತೆ ಕಾರ್ಯ ನಿರ್ವಹಿಸುವ ಪರವಾನಗಿ ಭೂಮಾಪಕರಿಗೆ ನೀಡುವ ಸೇವಾ ಸಂಭಾವನೆಯನ್ನೂ ಸರ್ಕಾರ ಪರಿಷ್ಕರಿಸಿದೆ. ಪೂರ್ಣ ಪ್ರಮಾಣದಲ್ಲಿ ಅಪ್‌ಲೋಡ್ ಮಾಡಿ ಇತ್ಯರ್ಥಪಡಿಸಿದ ಪ್ರತಿ ಅರ್ಜಿಗೆ ₹2,000 ಹಾಗೂ ಹೆಚ್ಚಿನ ಬಹುಮಾಲೀಕತ್ವದ ಹಿಸ್ಸಾ ಬ್ಲಾಕ್ ವಿಂಗಡಿಸಿದ ಪ್ರತಿ ಹಿಸ್ಸೆ ಬ್ಲಾಕ್‌ಗೆ ₹300 ನೀಡಲು ನಿಗದಿಪಡಿಸಲಾಗಿದೆ.
ಅದೇ ರೀತಿ ಆಧುನಿಕ ಉಪಕರಣಗಳು/ರೋವರ್ ಬಳಸಿ ಅಳತೆ ಕಾರ್ಯ ನಿರ್ವಹಿಸಿದಲ್ಲಿ ಪ್ರತಿ ಅರ್ಜಿಗೆ ₹1,000 ಹಾಗೂ ಹೆಚ್ಚಿನ ಬಹುಮಾಲೀಕತ್ವದ ಹಿಸ್ಸಾ ಬ್ಲಾಕ್ ವಿಂಗಡಿಸಿದ ಪ್ರತಿ ಹಿಸ್ಸೆ ಬ್ಲಾಕ್‌ಗೆ ₹200 ಸೇವಾ ಸಂಭಾವನೆ ನೀಡಲಾಗುತ್ತದೆ.
BMS ಮೂಲಕ ಸೇವಾ ಸಂಭಾವನೆ ಪಾವತಿ
ಪರವಾನಗಿ ಭೂಮಾಪಕರಿಗೆ ಸೇವಾ ಸಂಭಾವನೆಯನ್ನು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿರುವ ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿಗಳು (DDOs) ಮೂಲಕ ಖಜಾನೆ-2ರ Beneficiary Management System (BMS) Moduleನಲ್ಲಿ ಪಾವತಿಸಲು ಸರ್ಕಾರ ಅನುಮೋದನೆ ನೀಡಿದೆ.
ಈ ಹೊಸ ದರಗಳು ಅಕ್ಟೋಬರ್ 1, 2026ರಿಂದ ಭವಿಷ್ಯಾನ್ವಯವಾಗಿ ಜಾರಿಗೆ ಬರಲಿದ್ದು, ಸಾರ್ವಜನಿಕರು ಮೋಜಣಿ, ಹದ್ದುಬಸ್ತು, ಪೋಡಿ ಸೇರಿದಂತೆ ವಿವಿಧ ಭೂಮಾಪನ ಸೇವೆಗಳಿಗೆ ಅರ್ಜಿ ಸಲ್ಲಿಸುವಾಗ ಪರಿಷ್ಕೃತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಅಧಿಕೃತ ಆದೇಶದ ಪ್ರತಿ

