HomeKarnatakaಸರ್ಕಾರಿ ನೌಕರರಿಗೆ ಬಂತು ಮೊಬೈಲ್ ಆಧಾರಿತ ಹಾಜರಾತಿ

ಸರ್ಕಾರಿ ನೌಕರರಿಗೆ ಬಂತು ಮೊಬೈಲ್ ಆಧಾರಿತ ಹಾಜರಾತಿ

ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಸದ್ಯ ಜಾರಿಗೊಳಿಸಿದೆ. ಆದರೆ ಹಂತ ಹಂತವಾಗಿ ಮೊಬೈಲ್ ಆಧಾರಿತ ಹಾಜರಾತಿ ಜಾರಿಗೊಳಿಸಲಾಗುತ್ತದೆ ಎಂದು 202-26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.

ಈಗ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಮೊಬೈಲ್ ಆಧಾರಿತ ಹಾಜರಾತಿ ಜಾರಿಗೆ ಬಂದಿದೆ. ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮೊಬೈಲ್ ಆಧಾರಿತ ಹಾಜರಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಇಲಾಖೆಯು ಈಗಾಗಲೇ ಚಾಲ್ತಿಯಲ್ಲಿದ್ದ ಬಯೋಮೆಟ್ರಿಕ್ ಹಾಜರಾತಿಯನ್ನು ರದ್ದುಗೊಳಿಸಿ, ಮೊಬೈಲ್ ಆಧಾರಿತ ಹಾಜರಾತಿಯ (ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ) ಮೂಲಕ ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಾತಿ ನೀಡಬೇಕೆಂದು ಎಂದು ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹೊಸ ಹಾಜರಾತಿ ವ್ಯವಸ್ಥೆಯನ್ನು ಅನುಸರಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವೇತನವನ್ನು ಕಡಿತಗೊಳಿಸುವುದರ ಜೊತೆಗೆ ನಡತೆ ನಿಯಮದ ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕರು ತಿಳಿಸಿದ್ದಾರೆ.

ಹೇಗೆ ಕೆಲಸ ಮಾಡಲಿದೆ?; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಈಗಾಗಲೇ ಈ ಮಾದರಿ ಹಾಜರಾತಿಯನ್ನು ಜಾರಿಗೊಳಿಸಲಾಗಿತ್ತು. ಈಗ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿಯೂ ಇದು ಜಾರಿಗೆ ಬಂದಿದೆ.

 ಮೊಬೈಲ್ ಆಧಾರಿತ ಎಐ ತಂತ್ರಜ್ಞಾನ ಚಾಲಿತವಾದ ಫೇಸ್ ರೆಕಗ್ನಿಶನ್ ವ್ಯವಸ್ಥೆಯಡಿ ಇದು ಕಾರ್ಯ ನಿರ್ವಹಣೆ ಮಾಡುತ್ತಿದೆ. ಆಫೀಸ್ ಒಳಗೆ ಹೋಗುವ ಮುನ್ನ ಸೆಲ್ಫೀ ಮೂಲಕ ಇದು ನೌಕರರು/ ಅಧಿಕಾರಿಗಳ ಹಾಜರಾತಿಯನ್ನು ದಾಖಲು ಮಾಡಿಕೊಳ್ಳುತ್ತದೆ.

ಈಗಾಗಲೇ ಚಾಲ್ತಿಯಲ್ಲಿರುವ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಲವಾರು ಲೋಪದೋಷಗಳಿದ್ದವು. ಆದ್ದರಿಂದ ಆಧುನಿಕ ತಂತ್ರಜ್ಞಾನವನ್ನು ಬಳಕೆ  ಮಾಡಿಕೊಂಡು ಸರ್ಕಾರಿ ನೌಕರರ ಹಾಜರಾತಿಯನ್ನು ಮೊಬೈಲ್ ಮೂಲಕ ದಾಖಲು ಮಾಡಲಾಗುತ್ತಿದೆ. ಇದಕ್ಕಾಗಿಯೇ ಅಪ್ಲಿಕೇಶನ್ ಸಿದ್ಧಗೊಳಿಸಲಾಗಿದೆ.

ಕರ್ನಾಟಕ ಸರ್ಕಾರದ ವತಿಯಿಂದಲೇ ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAMS) ಅಭಿವೃದ್ಧಿಗೊಳಿಸಲಾಗಿದೆ. ಕಛೇರಿಯ ಹಾಜರಾತಿ ವ್ಯವಸ್ಥೆಯನ್ನು ಈ ಮುಖಾಂತರವಾಗಿ ನಿರ್ವಹಿಸುವುದರಿಂದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಏಕರೂಪವಾದ ಹಾಜರಾತಿ ನಿರ್ವಹಣಾ ವ್ಯವಸ್ಥೆಯನ್ನು ಹಂತ ಹಂತವಾಗಿ ಮಾಡಲಾಗುತ್ತದೆ.

ಅಧಿಕಾರಿ/ ನೌಕರರು ಕಚೇರಿ ಆವರಣದಲ್ಲಿ ಸೆಲ್ಪೀ ತೆಗೆದುಕೊಳ್ಳಬೇಕು. ಈ ಸೆಲ್ಪೀ ಆಧಾರ್ ಆಧಾರಿತ ವಿವರಗಳ ಜೊತೆ ಹೋಲಿಕೆಯಾಗುತ್ತದೆ. ಹಾಜರಾತಿಯನ್ನು ನಿಖರವಾದ ಸಮಯದಲ್ಲಿ ಇದು ದಾಖಲಿಸುತ್ತದೆ. ಕಚೇರಿಯ 100 ರಿಂದ 200 ಮೀಟರ್ ವ್ಯಾಪ್ತಿಯಲ್ಲಿಯೇ ಈ ಸೆಲ್ಫೀ ತೆಗೆದುಕೊಂಡಿರಬೇಕು.

ಈ ವ್ಯವಸ್ಥೆಯ ಮೂಲಕ ಯಾವುದೇ ರೀತಿಯಲ್ಲಿ ವಂಚಿಸಲು ಸಾಧ್ಯವಿಲ್ಲ, ಹಾಜರಾತಿ ಖಚಿತವಾಗಿ ದಾಖಲಾಗುವುದರಿಂದ ನಿಯಮಿತವಾಗಿ ಕೆಲಸಕ್ಕೆ ಹಾಜರಾಗುವುದು ಅಗತ್ಯ. ಕಚೇರಿಯಲ್ಲಿಯೇ ಸೆಲ್ಫೀ ತೆಗೆದುಕೊಳ್ಳಬೇಕಾದ ಕಾರಣ ಹಾಜರಾತಿಗೆ ಖಚಿತತೆ ಸಹ ಬರುತ್ತದೆ.

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಬಹುತೇಕ ಇಲಾಖೆಗಳು ಬಯೋಮೆಟ್ರಿಕ್ ಸಿಸ್ಟಮ್ ಅಥವಾ ಹಸ್ತಸಹಿತ ಲೆಡ್ಜರ್ ಅನ್ನು ಹಾಜರಾತಿಗಾಗಿ ಬಳಕೆ ಮಾಡುತ್ತಿವೆ. ಕೆಲವು ನೌಕರರು ಈ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular