HomeIndiaBIG NEWS: ಮೊಬೈಲ್ ನಲ್ಲಿ ಗೇಮ್ ಆಡುತ್ತಾ ಕಾಲಹರಣ: ಬೈದು ಬುದ್ಧಿ ಹೇಳಿದ್ದಕ್ಕೆ ಮನೆ ಬಿಟ್ಟು...

BIG NEWS: ಮೊಬೈಲ್ ನಲ್ಲಿ ಗೇಮ್ ಆಡುತ್ತಾ ಕಾಲಹರಣ: ಬೈದು ಬುದ್ಧಿ ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಮೂವರು ಮಕ್ಕಳು

ಸೂರತ್: ಮಕ್ಕಳ ಕೈಗೆ ಮೊಬೈಲ್ ಸಿಕ್ಕರೇ ಪ್ರಪಂಚವನ್ನೇ ಮರೆತುಬಿಡುತ್ತಾರೆ. ದಿನವಿಡಿ ಗೇಮ್ ಆಡುತ್ತಾ ಕಾಲಕಳೆಯುತ್ತಾರೆ. ಹೀಗೆ ಮೊಬೈಲ್ ಗೇಮ್ ಗೀಳಿಗೆ ಬಿದ್ದ ಮೂವರು ಮಕ್ಕಳು ಪೋಷಕರು ಬೈದು ಬುದ್ದ್ ಹೇಳಿ ಮೊಬೈಲ್ ಕೊಡದಿದ್ದಕ್ಕೆ ಮನೆಯನ್ನೇ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಮೊಬೈಲ್ ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮೂವರು ಅಪ್ರಾಪ್ತ ಮಕ್ಕಳು ಮನೆ ಬಿಟ್ಟು ಹೋಗಿದ್ದಾರೆ. ಗುಜರಾತ್ ​ನ ಸೂರತ್​ನಲ್ಲಿ ಈ ಘಟನೆನಡೆದಿದೆ. ಮೂವರು ಮಕ್ಕಳು ಫ್ರೀ ಫೈರ್ ಗೇಮ್ ದಿನವಿಡೀ ಆಡುತ್ತಿದ್ದರು, ಇದಕ್ಕೆ ಕೋಪಗೊಂಡ ತಂದೆ ಗೇಮ್ ಆಡಬೇಡಿ ಎಂದು ಮೊಬೈಲ್ ಕಿತ್ತುಕೊಂಡು ಸಿಮ್ ತೆಗೆದಿಟ್ಟಿದ್ದಾರೆ. ಇದರಿಂದ ಬೇಸತ್ತ ಮೂವರು ಮಕ್ಕಳು 15,000 ರೂ.ಹಣದೊಂದಿಗೆ ಮನೆ ಬಿಟ್ಟು ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಣೆಯಾದ ಮಕ್ಕಳ ವಯಸ್ಸು 14, 11 ಮತ್ತು 9 ವರ್ಷ, ಅವರಲ್ಲಿ ಒಬ್ಬ ಬಾಲಕಿ ಕೂಡ ಇದ್ದಾಳೆ. ಮೇ 19ರ ಬೆಳಗಿನ ಜಾವ ಕುಟುಂಬದವರೆಲ್ಲಾ ಮಲಗಿರುವಾಗ ಮೂವರು ಮಕ್ಕಳು ಮನೆಯಿಂದ ಹೊರ ಹೋಗಿದ್ದಾರೆ.

ಮಕ್ಕಳು ತಮ್ಮ ತಂದೆಯ ಮೊಬೈಲ್ ಫೋನ್‌ನಲ್ಲಿ ಜನಪ್ರಿಯ ಆನ್‌ಲೈನ್ ಬ್ಯಾಟಲ್ ಗೇಮ್ ಗರೆನಾ ಫ್ರೀ ಫೈರ್ ಆಡುತ್ತಿದ್ದರು. ತಂದೆ ಕಳೆದ ತಿಂಗಳ ಕೊನೆಯಲ್ಲಿ ತನ್ನ ಹಳ್ಳಿಗೆ ಹೋಗುವಾಗ ಆಕಸ್ಮಿಕವಾಗಿ ತನ್ನ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಈ ವೇಳೆ ಮೊಬೈಲ್ ಮಕ್ಕಳ ಕೈಗೆ ಸಿಕ್ಕಿದೆ. ಮಕ್ಕಳು ಮೊಬೈಲ್​ನಲ್ಲಿ ಆಟಗಳನ್ನು ಆಡುತ್ತಾ ಕಾಲ ಕಳೆದಿದ್ದರು ಎಂದು ಆರೋಪಿಸಲಾಗಿದೆ.

ತಂದೆ ಮನೆಗೆ ಹಿಂದಿರುಗಿದಾಗ ತಮ್ಮ ಮಕ್ಕಳು ಮೊಬೈಲ್ ಗೇಮ್ ನಲ್ಲಿ ದಿನವಿಡಿ ಮುಳುಗಿರುವುದನ್ನು ಕಂಡಿದ್ದಾರೆ. ಮಕ್ಕಳು ಮೊಬೈಲ್ ಹುಚ್ಚು ಹಿಡಿಸಿಕೊಂಡಿದ್ದಾರೆ ಎಂದು ತಾಯಿ ದೂರಿದ್ದರು. ಮಕ್ಕಳಿಗೆ ಮೊಬೈಲ್ ಅಭ್ಯಾಸ ಬಿಡಿಸಲು ತಂದೆ ಫೋನ್‌ನಿಂದ ಸಿಮ್ ಕಾರ್ಡ್ ತೆಗೆದು ಮೊಬೈಲ್ ಅನ್ನು ಲಾಕ್ ಮಾಡಿದ್ದರು ಎಂದು ವರದಿಯಾಗಿದೆ. ಈ ನಿರ್ಬಂಧದಿಂದ ಮಕ್ಕಳು ಕೋಪಗೊಂಡರು, ನಂತರ ಅವರು ಮನೆ ಬಿಡಲು ನಿರ್ಧರಿಸಿ ಮನೆಯಿಂದ ಹೊರ ಹೋದವರು ಇನ್ನೂ ವಾಪಸ್ ಆಗಿಲ್ಲ.

ಮಕ್ಕಳು ಮನೆಯಲ್ಲಿ ಕಾಣದೊದ್ದಾಗ, ಹುಡುಕಿದರೂ ಪತ್ತೆಯಾಗದಿದ್ದಾಗ ಕಂಗಾಲಾದ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಕ್ಕಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular