HomeKarnatakaಹಿಂಬಾಗಿಲಿಂದ ಬಂದವರು, ಯಾರನ್ನೋ ಸಿಎಂ ಮಾಡಿದ್ದೇವೆ: ನಮ್ಮೂರಿನ ಡಿಕೆಶಿ ಸಿಎಂ ಆಗಲಿ ಬಿಡಿ: ಎಂಎಲ್ಸಿ ಪುಟ್ಟಣ್ಣ...

ಹಿಂಬಾಗಿಲಿಂದ ಬಂದವರು, ಯಾರನ್ನೋ ಸಿಎಂ ಮಾಡಿದ್ದೇವೆ: ನಮ್ಮೂರಿನ ಡಿಕೆಶಿ ಸಿಎಂ ಆಗಲಿ ಬಿಡಿ: ಎಂಎಲ್ಸಿ ಪುಟ್ಟಣ್ಣ ಹೇಳಿಕೆ

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶೇ. 100ರಷ್ಟು ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಪುಟ್ಟಣ್ಣ, ಯಾರನ್ನೋ ಸಿಎಂ ಮಾಡಿದ್ದೇವೆ. ನಮ್ಮ ಮನೆ ಮಗ, ನಮ್ಮೂರಿನವರು ಸಿಎಂ ಆಗಲಿ ಬಿಡಿ. ಆದರೆ ಇವೆಲ್ಲ ನಮ್ಮಿಂದ ನಿರ್ಧಾರವಾಗುವುದಿಲ್ಲ. ನಮಗೆ ಹೈಕಮಾಂಡ್ ಇದೆ. ನಾಳೆಯೇ ಮುಖ್ಯಮಂತ್ರಿ ಮಾಡಬಹುದು ಅಥವಾ ಇನ್ಯಾವಾಗಲಾದರೂ ಮಾಡಬಹುದು. ಆದರೆ, ಯಾವತ್ತಾದರೂ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ನಾವು ಶಿವಕುಮಾರ್ ಪರವಾಗಿ ಇದ್ದೇವೆ. ಹಿಂದಿನಿಂದಲೂ ಡಿ.ಕೆ. ಶಿವಕುಮಾರ್ ಬಹಳ ಕಷ್ಟಪಟ್ಟಿದ್ದಾರೆ. ಅನೇಕರು ಹಿಂಭಾಗಲಿನಿಂದ ಬಂದು ಮುಖ್ಯಮಂತ್ರಿ ಆಗಿದ್ದಾರೆ. ನಾನು ಅವರ ಹೆಸರು ಹೇಳಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

ಹೆಚ್.ಡಿ. ದೇವೇಗೌಡರದ್ದು, ಸಿದ್ದರಾಮಯ್ಯ ಅವರದು ಹೋರಾಟದ ಜೀವನ. ಅವರನ್ನು ಬೇರೆಯವರಿಗೆ ಏಕೆ ಹೋಲಿಸುತ್ತೀರಿ ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ಯಾರಂಟಿ ಯೋಜನೆಯ ಅಂಡರ್ ಕರೆಂಟ್ ಇದು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 23 ರಿಂದ 25 ಸ್ಥಾನ ಗೆಲ್ಲುತ್ತೇವೆ. ಬೆಂಗಳೂರು ಗ್ರಾಮಾಂತರದಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ. ಇನ್ನು 9 ವರ್ಷ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆ ಮುಂದುವರೆಯಲಿದೆ ಎಂದು ಪುಟ್ಟಣ್ಣ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular