HomeKarnatakaಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಹೋಲ್ ಸೇಲ್ ಆಗಿ ಸರ್ಕಾರವನ್ನೇ ಬದಲಾಯಿಸೋಣ: ಸಿ.ಟಿ. ರವಿ

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಹೋಲ್ ಸೇಲ್ ಆಗಿ ಸರ್ಕಾರವನ್ನೇ ಬದಲಾಯಿಸೋಣ: ಸಿ.ಟಿ. ರವಿ

ತುಮಕೂರು: ಜೂನ್ 4ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಬರಲಿದೆ. ಫಲಿತಾಂಶದ ಬಳಿಕ ಹೋಲ್ ಸೇಲ್ ಆಗಿ ಸರ್ಕಾರವನ್ನೇ ಬದಲಾಯಿಸೋಣ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಯಾರೋ ಒಬ್ಬರು ಬಂದು ಮನವಿ ಸಲ್ಲಿಸಿದರು. ಅವರು ಸಂಬಳ ಹೆಚ್ಚಿಸಲು ಅಥವಾ ಅನುದಾನಕ್ಕೆ ಮನವಿ ಸಲ್ಲಿಸಿರಬಹುದು ಎಂದು ಕೊಂಡೆವು. ಆದರೆ, ಅವರು ಏನಾದರೂ ಮಾಡಿ ಶಿಕ್ಷಣ ಸಚಿವರನ್ನು ಬದಲಾಯಿಸಿ ಎಂದು ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.

ರಿಟೇಲ್ ಸಚಿವರನ್ನು ಬದಲಾಯಿಸುವ ಬದಲು ಹೋಲ್ ಸೇಲ್ ಆಗಿ ಎಲ್ಲರನ್ನೂ ಬದಲಾಯಿಸಿ ಬಿಡೋಣ. ಶಿಕ್ಷಣ ಸಚಿವರನ್ನು ಮಾತ್ರ ಬದಲಿಸದೇ ಎಂಟೈರ್ ಸರ್ಕಾರವನ್ನೇ ಬದಲಿಸೋಣ. ಹೇಗೂ ಜೂನ್ 4ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಬರುತ್ತದೆ. ಫಲಿತಾಂಶದ ಬಳಿಕ ಇಡೀ ಸರ್ಕಾರವನ್ನೇ ಬದಲಾಯಿಸಿ ಬಿಡೋಣ ಎಂದು ಸಿ.ಟಿ. ರವಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular