HomeKarnatakaಹಾಸ್ಟೆಲ್ ವಾರ್ಡನ್ ಗೆ ರೂಮ್ ಗೆ ಹಾಕಿ ಬಾರಿಸಿ ಎಂದ ಶಾಸಕ; ವಿಡಿಯೋ ವೈರಲ್

ಹಾಸ್ಟೆಲ್ ವಾರ್ಡನ್ ಗೆ ರೂಮ್ ಗೆ ಹಾಕಿ ಬಾರಿಸಿ ಎಂದ ಶಾಸಕ; ವಿಡಿಯೋ ವೈರಲ್

ಚಿತ್ರದುರ್ಗ: ಹಾಸ್ಟೇಲ್ ವಾರ್ಡನ್ ಗೆ ಬಾರಿಸಿ ಎಂದು ಶಾಸಕ ವಿರೇಂದ್ರ ಪಪ್ಪಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಸ್ಟೇಲ್ ಊಟ ಸರಿಯಿಲ್ಲ, ಕೊಳೆತ ತರಕಾರಿ ಹಾಕಿ ಅಡುಗೆ ಮಾಡುತ್ತಾರೆ. ಹುಳಗಳು ಇರುವ ಊಟ ಬಡಿಸುತ್ತಿದ್ದಾರೆ ಎಂದು ಕಾನೂನು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾ ಸ್ಥಳಕ್ಕೆ ತೆರಳಿದ ಶಾಸಕ ವಿರೇಂದ್ರ ಪಪ್ಪಿ ಹಾಸ್ಟೇಲ್ ವಾರ್ಡನ್ ವಿರುದ್ಧ ಕಿಡಿ ಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೊಮ್ಮೆ ಹೀಗಾದರೆ ವಾರ್ಡನ್ ನನ್ನು ಹೊಡೆಯಿರಿ. ಹುಳ ಇರುವ ಆಹಾರ, ಕೊಳೆತ ತರಕಾರಿ ಹಾಕಿದ ಉಪಹಾರ ಕೊಟ್ಟರೆ ಮುಲಾಜಿಲ್ಲದೇ ವಾರ್ಡನ್ ಗೆ ರೂಮ್ ಗೆ ಹಾಕಿ ಬಾರಿಸಿ. ಅವನಿಗೂ ಅದೇ ಊಟ ತಿನ್ನುವಂತೆ ಹೇಳಿ. ಆಗ ಅವರಿಗೆ ಬುದ್ಧಿಬರುತ್ತದೆ ಎಲ್ಲಾ ಸರಿ ಹೋಗುತ್ತದೆ ಎಂದು ಗುಡುಗಿದ್ದಾರೆ. ಶಾಸಕರ ಪ್ರಚೋದನಕಾರಿ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular