HomeKarnatakaBIG NEWS: ಮಂತ್ರಿಗಿರಿಗಾಗಿ ಮತ್ತೆ ಶಾಸಕರ ಕೂಗು: ಸಚಿವ ಸ್ಥಾನ ಬೇಡಿಕೆ ಅಲ್ಲ, ಅದು ನನ್ನ...

BIG NEWS: ಮಂತ್ರಿಗಿರಿಗಾಗಿ ಮತ್ತೆ ಶಾಸಕರ ಕೂಗು: ಸಚಿವ ಸ್ಥಾನ ಬೇಡಿಕೆ ಅಲ್ಲ, ಅದು ನನ್ನ ಹಕ್ಕು ಎಂದ ನರೇಂದ್ರಸ್ವಾಮಿ

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರಿಂದ ಮತ್ತೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಆರಂಭವಾಗಿದೆ. ಸಚಿವ ಸ್ಥಾನದಿಂದ ವಂಚಿತರಾದ ಒಬ್ಬೊಬ್ಬ ಶಾಸಕರು ಮತ್ತೆ ಹೊಸವರಸೆ ಆರಂಭಿಸಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಸಚಿವ ಸ್ಥಾನ ಸಿಗದಿರುವುದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ನರೇಂದ್ರಸ್ವಾಮಿ, ಸಚಿವ ಸ್ಥಾನಕ್ಕೆ ಬೇಡಿಕೆ ಅಲ್ಲ, ಅದು ನನ್ನ ಹಕ್ಕು ಎಂದು ಹೇಳಿದ್ದಾರೆ. ಸಚಿವ ಸ್ಥಾನ ನೀಡುವುದಾಗಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅವರಿಗೂ ಹೈಕಮಾಂಡ್ ನಿಂದ ಅನುಮತಿ ಸಿಗಬೇಕು. ಮಂಡ್ಯದಲ್ಲಿ ನಾನೇ ಹಿರಿಯ ಶಾಸಕ. ಹಾಗಾಗಿ ಸಚಿವ ಸ್ಥಾನ ನೀಡುವ ನಿರೀಕ್ಷೆಯಿದೆ ಎಂದಿದ್ದಾರೆ.

ಮಂಡ್ಯ ಭಾಗದಲ್ಲಿ ಯಾರು ಸೀನಿಯರ್? ಪಕ್ಷ ಕಟ್ಟಿದವರು ಯಾರು? ನಾನೇ ಅಲ್ವಾ? ಹಾಗಿರುವಗ ಸಚಿವ ಸ್ಥಾನ ನನ್ನ ಹಕ್ಕು. ನನಗೆ ಅರ್ಹತೆ ಇಲ್ವಾ? ವಿದ್ಯಾರ್ಥಿದಿಸೆಯಿಂದ ಕಾಂಗ್ರೆಸ್ ಪಕ್ಷ ಕಟ್ಟಿದವನು ನಾನು. ನನ್ನ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular