HomeBeautyʼಡಾರ್ಕ್‌ ಸರ್ಕಲ್‌ʼ ನಿವಾರಣೆಗೆ ಬಾದಾಮಿ ಎಣ್ಣೆಯಲ್ಲಿ ಇದನ್ನು ಮಿಕ್ಸ್ ಮಾಡಿ ಹಚ್ಚಿ

ʼಡಾರ್ಕ್‌ ಸರ್ಕಲ್‌ʼ ನಿವಾರಣೆಗೆ ಬಾದಾಮಿ ಎಣ್ಣೆಯಲ್ಲಿ ಇದನ್ನು ಮಿಕ್ಸ್ ಮಾಡಿ ಹಚ್ಚಿ

ನಿಮ್ಮ ಕಣ್ಣಿನ ಸುತ್ತಲಿನ ಕಪ್ಪು ವಲಯಗಳು ನಿಮ್ಮ ಅಂದವನ್ನು ಕೆಡಿಸುತ್ತದೆ. ನಿದ್ರೆಯ ಕೊರತೆ, ರಕ್ತಹೀನತೆಯ ಕಾರಣಗಳಿಂದ ಕಣ್ಣಿನ ಸುತ್ತಲೂ ಈ ಡಾರ್ಕ್ ಸರ್ಕಲ್ ಮೂಡುತ್ತದೆ. ಇದನ್ನು ನಿವಾರಿಸಲು ಬಾದಾಮಿ ಎಣ್ಣೆ ಬಳಸಿ. ಬಾದಾಮಿ ಎಣ್ಣೆಯಲ್ಲಿರುವ ಪೋಷಕಾಂಶ ನಿಮ್ಮ ಡಾರ್ಕ್ ಸರ್ಕಲ್ ನ್ನು ನಿವಾರಿಸಲು ಸಹಕಾರಿಯಾಗಿದೆ.

*ಬಾದಾಮಿ ಎಣ್ಣೆ ½ ಚಮಚ, ಜೇನುತುಪ್ಪ ½ ಚಮಚ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತಲೂ ಹಚ್ಚಿಕೊಳ್ಳಿ. ಮರುದಿನ ವಾಶ್ ಮಾಡಿ. ಇದರಿಂದ ಚರ್ಮ ತೇವಾಂಶದಿಂದ ಕೂಡಿ ಸುಕ್ಕುಗಳು ಮೂಡುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ನಿವಾರಣೆಯಾಗಲು ಮೊದಲಿಗೆ ಹತ್ತಿಯ ಉಂಡೆಗಳ ಸಹಾಯದಿಂದ ರೋಸ್ ವಾಟರ್ ಹಚ್ಚಿ ಒಣಗಲು ಬಿಡಿ ಬಳಿಕ ಬಾದಾಮಿ ಎಣ್ಣೆಯಿಂದ 2 ನಿಮಿಷಗಳ ಕಾಲ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೇ ಬಿಡಿ.

* ಆಲಿವ್ ಆಯಿಲ್ ½ ಚಮಚ ಮತ್ತು ½ ಚಮಚ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಕಣ್ಣಿನ ಸುತ್ತಲೂ ಹಚ್ಚಿ 2 ನಿಮಿಷಗಳ ಕಾಲ ಮಸಾಜ್ ಮಾಡಿ. ಇದು ಕಣ್ಣಿನ ಸುತ್ತಲಿನ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular