HomeInternationalವಿಶ್ವ ಸುಂದರಿ ವೇದಿಕೆಯಲ್ಲಿ ದೇವಿಯ ಅವತಾರ ತಾಳಿದ ಭಾರತದ ನಿಕಿತಾ ಪೋರ್ವಾಲ್: ಕಣ್ಮನ ಸೆಳೆದ ನೃತ್ಯ...

ವಿಶ್ವ ಸುಂದರಿ ವೇದಿಕೆಯಲ್ಲಿ ದೇವಿಯ ಅವತಾರ ತಾಳಿದ ಭಾರತದ ನಿಕಿತಾ ಪೋರ್ವಾಲ್: ಕಣ್ಮನ ಸೆಳೆದ ನೃತ್ಯ ವೈಭವ!

ವಿಯೆಟ್ನಾಂನಲ್ಲಿ ನಡೆಯುತ್ತಿರುವ 73ನೇ ಮಿಸ್ ವರ್ಲ್ಡ್ 2026 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2024 ವಿಜೇತೆ ನಿಕಿತಾ ಪೋರ್ವಾಲ್ ತಮ್ಮ ಭವ್ಯ ನೃತ್ಯ ಪ್ರದರ್ಶನದ ಮೂಲಕ ಸಾಗರದಾಚೆಯೂ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಾರಿಯ ಕಾಂಟೆಸ್ಟ್‌ನ ‘ಡಾನ್ಸಸ್ ಆಫ್ ದಿ ವರ್ಲ್ಡ್’ ಸುತ್ತಿನಲ್ಲಿ ಉಜ್ಜಯಿನಿ ಮೂಲದ ಈ ನಟಿ ಭಾರತೀಯ ಸಂಸ್ಕೃತಿ ಹಾಗೂ ದೇವಿಯ ಶಕ್ತಿಯನ್ನು ಬಿಂಬಿಸುವ ಶೈಲಿಯಲ್ಲಿ ಹೆಜ್ಜೆ ಹಾಕಿದ್ದು, ಆ ವಿಡಿಯೋ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಖ್ಯಾತ ಡಿಸೈನರ್ ಸಂಸ್ಥೆ ತೊರಾನಿ ವಿನ್ಯಾಸಗೊಳಿಸಿದ್ದ ವಿಶೇಷವಾದ ಧೋತಿ ಶೈಲಿಯ ಉಡುಪು ಹಾಗೂ ಮೀನಾಕ್ಷಿ ದೇವಿಯ ರೂಪದಿಂದ ಪ್ರೇರಿತವಾದ ಬಣ್ಣ ಬಣ್ಣದ ಕಸೂತಿ ಕೆಲಸಗಳಿದ್ದ ಉಡುಪಿನಲ್ಲಿ ನಿಕಿತಾ ಕಂಗೊಳಿಸಿದ್ದರು. ಇದರ ಜೊತೆಗೆ ಅಮಾಮಾ ಜ್ಯುವೆಲ್ಸ್‌ನ ಬಂಗಾರದ ಬಸ್ಟಿಯರ್ ಹಾಗೂ ಸಾಂಪ್ರದಾಯಿಕ ಆಭರಣಗಳನ್ನು ಧರಿಸುವ ಮೂಲಕ ರಾಜಪ್ರಭುತ್ವದ ಮೆರುಗನ್ನು ವೇದಿಕೆಗೆ ತಂದಿದ್ದರು. ತಮ್ಮ ಈ ಉಡುಪು ಮತ್ತು ನೃತ್ಯವು ಭಾರತೀಯ ಪರಂಪರೆ ಹಾಗೂ ದೇವಿಯ ಶಕ್ತಿಯ ಸಂಕೇತವಾಗಿದೆ ಎಂದು ನಿಕಿತಾ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಇವರ ಕೆಲವೇ ಸೆಕೆಂಡುಗಳ ನೃತ್ಯದ ವಿಡಿಯೋ ವೀಕ್ಷಿಸಿದ ಅಭಿಮಾನಿಗಳು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. “ನೀವು ಮಿಸ್ ವರ್ಲ್ಡ್ ಸ್ಪರ್ಧೆಯ ಮುಖ್ಯ ಆಕರ್ಷಣೆಯಾಗಿದ್ದೀರಿ, ಪ್ರತಿಯೊಬ್ಬರ ಕಣ್ಣುಗಳು ನಿಮ್ಮ ಮೇಲೆಯೇ ಇವೆ” ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ನಿಕಿತಾ ಅವರ ಸೌಂದರ್ಯ ಹಾಗೂ ನೃತ್ಯವನ್ನು ಶ್ಲಾಘಿಸಿದ್ದಾರೆ. ಸೆಪ್ಟೆಂಬರ್ 5, 2026 ರಂದು ನಡೆಯಲಿರುವ ಮಿಸ್ ವರ್ಲ್ಡ್ ಅಂತಿಮ ಸ್ಪರ್ಧೆಯು ಜಿಯೋ ಹಾಟ್‌ಸ್ಟಾರ್ ನಲ್ಲಿ ನೇರಪ್ರಸಾರವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular