HomeLive NewsSHOCKING : ರೈಲ್ವೇ ಸೀಟ್ ಕವರ್‌'ಗಳನ್ನು ಕಿತ್ತು ವಿಕೃತಿ ಮೆರೆದ ಕಿಡಿಗೇಡಿಗಳು ; ವೈರಲ್...

SHOCKING : ರೈಲ್ವೇ ಸೀಟ್ ಕವರ್‌’ಗಳನ್ನು ಕಿತ್ತು ವಿಕೃತಿ ಮೆರೆದ ಕಿಡಿಗೇಡಿಗಳು ; ವೈರಲ್ ವೀಡಿಯೋಗೆ ವ್ಯಾಪಕ ಆಕ್ರೋಶ |WATCH VIDEO

ನವದೆಹಲಿ: ಭಾರತೀಯ ರೈಲ್ವೆಯ ಕೋಚ್‌ವೊಂದರಲ್ಲಿ ಕಿಡಿಗೇಡಿಗಳ ಗುಂಪೊಂದು ಸಾಮಾಜಿಕ ಜಾಲತಾಣದ ಕಂಟೆಂಟ್‌ಗಾಗಿ ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರೈಲ್ವೆ ಸೀಟ್ ಕವರ್ ಅನ್ನು ಹರಿಯುತ್ತಿರುವುದು ಕಂಡುಬಂದಿದ್ದು, ಇವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹುಚ್ಚು ಮಿತಿಮೀರಿದ್ದು, ಕಿಡಿಗೇಡಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿ ಸೀಟ್ ಕವರ್ ಅನ್ನು ಕಿತ್ತು ಹಾಕಿ ವಿಕೃತ ಸಂತೋಷ ಪಟ್ಟಿರುವ ವಿಡಿಯೋ ಈಗ ವೈರಲ್ ಆಗಿದೆ. ಸಾರ್ವಜನಿಕ ಆಸ್ತಿ ನಾಶಪಡಿಸಿರುವ ಈತನ ಉದ್ಧಟತನಕ್ಕೆ ನೆಟ್ಟಿಗರು ಕೆಂಡಾಮಂಡಲವಾಗಿದ್ದು, ರೈಲ್ವೆ ಇಲಾಖೆಯು ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಗುಲಾಬಿ ಬಣ್ಣದ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿರುವ ವ್ಯಕ್ತಿಯೊಬ್ಬ ರೈಲ್ವೆ ಸಾಮಾನ್ಯ ದರ್ಜೆಯ ಬೋಗಿಯಲ್ಲಿ ಕುಳಿತು ನೀಲಿ ಬಣ್ಣದ ಸೀಟ್ ಕವರ್ ಅನ್ನು ಹರಿಯುತ್ತಿರುವುದು ದಾಖಲಾಗಿದೆ. ಕ್ಯಾಮರಾ ಮುಂದೆ ಪೋಸು ನೀಡುತ್ತಾ ಈ ಕೃತ್ಯ ಎಸಗುತ್ತಿದ್ದರೆ, ಆತನ ಸ್ನೇಹಿತರು ಹಿನ್ನೆಲೆಯಲ್ಲಿ ನಗುತ್ತಿರುವುದು ಕೇಳಿಸುತ್ತದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣ ಬಳಕೆದಾರರು ಈತನ ಇನ್‌ಸ್ಟಾಗ್ರಾಮ್ ಬಳಕೆದಾರ ಹೆಸರನ್ನು ‘ಅಂಕಿತ್ ಟೊಪ್ಪೊ’ ಎಂದು ಗುರುತಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೋದ ಮುಂದಿನ ಭಾಗದಲ್ಲಿ, ಇನ್ನುಳಿದ ಇಬ್ಬರು ವ್ಯಕ್ತಿಗಳು ಚಲಿಸುತ್ತಿರುವ ರೈಲಿನೊಳಗೆ ಫಿಟ್ಟಿಂಗ್‌ಗಳನ್ನು ಹಿಡಿದು ನೇತಾಡುತ್ತಾ ಅಜಾಗರೂಕತೆಯಿಂದ ವರ್ತಿಸುತ್ತಿರುವುದು ಕಂಡುಬಂದಿದೆ. ಇದು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.ಈ ಕೃತ್ಯದ ಬಗ್ಗೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಇಂತಹ ಹುಚ್ಚರು ರೈಲ್ವೆ ಸೀಟುಗಳನ್ನು ಹರಿಯುತ್ತಾ ವಿಡಿಯೋ ಮಾಡಿ ಆನಂದಿಸುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ” ಎಂದು ಓರ್ವ ಬಳಕೆದಾರರು ಬರೆದಿದ್ದಾರೆ. ಇಂತಹ ಕೆಲಸ ಮಾಡುವುದರಿಂದ ತಾವು ಕೂಲ್ ಆಗಿ ಕಾಣುತ್ತೇವೆ ಎಂದು ಇವರು ಭಾವಿಸುತ್ತಾರೆ, ಆದರೆ ಇವರು ದೊಡ್ಡ ಮೂರ್ಖರಂತೆ ಕಾಣುತ್ತಿದ್ದಾರೆ. ಇವರು ಬೆಳೆಯುತ್ತಿರುವ ಆರ್ಥಿಕತೆಗೆ ಗೆದ್ದಲು ಇದ್ದಂತೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ವೈಯಕ್ತಿಕ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವ ಈ ಪ್ರವೃತ್ತಿಯನ್ನು ತಡೆಯಲು ಅಧಿಕಾರಿಗಳು ಕೂಡಲೇ ಇವರನ್ನು ಪತ್ತೆಹಚ್ಚಿ ಶಿಕ್ಷಿಸಬೇಕೆಂದು ಅನೇಕರು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular