HomeEntertainmentಮೊದಲ ದಿನವೇ ₹25.75 ಕೋಟಿ ಬಾಚಿದ ‘ಮಿರ್ಜಾಪುರ ’ ಸಿನಿಮಾ; 2026ರ ಬಿಗ್ ಓಪನರ್‌ಗಳ ಪಟ್ಟಿಗೆ...

ಮೊದಲ ದಿನವೇ ₹25.75 ಕೋಟಿ ಬಾಚಿದ ‘ಮಿರ್ಜಾಪುರ ’ ಸಿನಿಮಾ; 2026ರ ಬಿಗ್ ಓಪನರ್‌ಗಳ ಪಟ್ಟಿಗೆ ಎಂಟ್ರಿ!

ಮುಂಬೈ: ಬಹುನಿರೀಕ್ಷಿತ ‘ಮಿರ್ಜಾಪುರ: ದಿ ಮೂವಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಪಂಕಜ್ ತ್ರಿಪಾಠಿ, ಅಲಿ ಫಜಲ್ ಹಾಗೂ ರವಿ ಕಿಶನ್ ಅಭಿನಯದ ಈ ಚಿತ್ರ ಮೊದಲ ದಿನವೇ ಭಾರತದಲ್ಲಿ ಬರೋಬ್ಬರಿ ₹25.15 ಕೋಟಿ ಗಳಿಸುವ ಮೂಲಕ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ನಿರ್ದೇಶಕ ಗುರಮೀತ್ ಸಿಂಗ್ ಅವರ ಈ ಚಿತ್ರಕ್ಕೆ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಹುನಿರೀಕ್ಷಿತ ‘ಮಿರ್ಜಾಪುರ: ದಿ ಮೂವಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪಂಕಜ್ ತ್ರಿಪಾಠಿ, ಅಲಿ ಫಜಲ್ ಹಾಗೂ ರವಿ ಕಿಶನ್ ಅಭಿನಯದ ಈ ಚಿತ್ರ ಮೊದಲ ದಿನವೇ ಭಾರತದಲ್ಲಿ ಬರೋಬ್ಬರಿ ₹25.15 ಕೋಟಿ ಗಳಿಸುವ ಮೂಲಕ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ನಿರ್ದೇಶಕ ಗುರಮೀತ್ ಸಿಂಗ್ ಅವರ ಈ ಚಿತ್ರಕ್ಕೆ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಂಕಜ್ ತ್ರಿಪಾಠಿ, ಅಲಿ ಫಜಲ್ ಹಾಗೂ ರವಿ ಕಿಶನ್ ಅಭಿನಯದ ಬಹುನಿರೀಕ್ಷಿತ ‘ಮಿರ್ಜಾಪುರ: ದಿ ಮೂವಿ’ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಸಿಕ್ಕಿದೆ. ಸೆಪ್ಟೆಂಬರ್ 4ರಂದು ತೆರೆಕಂಡ ಸಿನಿಮಾ ಮೊದಲ ದಿನವೇ ಭಾರತದಲ್ಲಿ ಅಂದಾಜು ₹25.15 ಕೋಟಿ ಗಳಿಸಿ, 2026ರ ನಾಲ್ಕನೇ ಅತಿ ದೊಡ್ಡ ಹಿಂದಿ ಓಪನರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನಪ್ರಿಯ ಕ್ರೈಮ್ ವೆಬ್ ಸೀರಿಸ್ ‘ಮಿರ್ಜಾಪುರ’ ಆಧಾರಿತ ಈ ಸಿನಿಮಾ ಸೆಪ್ಟೆಂಬರ್ 4ರಂದು ಹಿಂದಿ ಹಾಗೂ ತೆಲುಗು ಡಬ್ ಆವೃತ್ತಿಯಲ್ಲಿ ಚಿತ್ರಮಂದಿರಗಳಿಗೆ ಬಿಡುಗಡೆಯಾಗಿದೆ.

ಮೊದಲ ದಿನದ ಗಳಿಕೆ ಎಷ್ಟು?

ಚಿತ್ರದ ಹಿಂದಿ ಆವೃತ್ತಿಯು ಮೊದಲ ದಿನ ಸುಮಾರು ₹24.60 ಕೋಟಿ ನೆಟ್ ಗಳಿಸಿದೆ. ತೆಲುಗು ಆವೃತ್ತಿಯಿಂದ ಸುಮಾರು ₹15 ಲಕ್ಷ ಆದಾಯ ಬಂದಿದೆ. ಒಟ್ಟಾರೆ ಭಾರತದ ಗ್ರಾಸ್ ಕಲೆಕ್ಷನ್ ಸುಮಾರು ₹29.70 ಕೋಟಿ ಎಂದು ಅಂದಾಜಿಸಲಾಗಿದೆ. ಶುಕ್ರವಾರ ದೇಶಾದ್ಯಂತ ಚಿತ್ರವನ್ನು 11,135 ಶೋಗಳಲ್ಲಿ ಪ್ರದರ್ಶಿಸಲಾಗಿತ್ತು. ಒಟ್ಟಾರೆ ಥಿಯೇಟರ್ ಆಕ್ಯುಪೆನ್ಸಿ ಶೇ. 42.81ರಷ್ಟಿತ್ತು.

ಬೆಳಗಿನ ಶೋಗಳಲ್ಲಿ ಶೇ.25.85ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದರೆ, ಮಧ್ಯಾಹ್ನ ಶೋಗಳಲ್ಲಿ ಅದು ಶೇ.41.15ಕ್ಕೆ ಏರಿಕೆಯಾಯಿತು. ಸಂಜೆ ಶೋಗಳಲ್ಲಿ ಶೇ.41.85ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ರಾತ್ರಿ ಶೋಗಳಿಗೆ ಪ್ರೇಕ್ಷಕರಿಂದ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದ್ದು, ಆಕ್ಯುಪೆನ್ಸಿ ಸುಮಾರು ಶೇ.62.38ಕ್ಕೆ ತಲುಪಿದೆ.

2026ರ ನಾಲ್ಕನೇ ಅತಿ ದೊಡ್ಡ ಹಿಂದಿ ಓಪನರ್

ಮೊದಲ ದಿನದ ಗಳಿಕೆಯೊಂದಿಗೆ ‘ಮಿರ್ಜಾಪುರ: ದಿ ಮೂವಿ’ 2026ರಲ್ಲಿ ಅತಿ ಹೆಚ್ಚು ಓಪನಿಂಗ್ ಪಡೆದ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.ಈ ಪಟ್ಟಿಯಲ್ಲಿ ‘ಧುರಂಧರ್ ದಿ ರಿವೆಂಜ್’ ₹99 ಕೋಟಿ ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ‘ಟಾಕ್ಸಿಕ್’ ₹55 ಕೋಟಿ ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದು, ‘ಬಾರ್ಡರ್ 2’ ಸುಮಾರು ₹30 ಕೋಟಿ ಗಳಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇನ್ನು ಇಮ್ರಾನ್ ಹಶ್ಮಿ ಅಭಿನಯದ ‘ಆವಾರಾಪನ್ 2’ ಚಿತ್ರವನ್ನು ‘ಮಿರ್ಜಾಪುರ: ದಿ ಮೂವಿ’ ಹಿಂದಿಕ್ಕಿದೆ. ‘ಆವಾರಾಪನ್ 2’ ಬಿಡುಗಡೆಯಾದ ಮೊದಲ ದಿನ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ₹22 ಕೋಟಿ ನೆಟ್ ಗಳಿಸಿತ್ತು.

ತಾರಾಬಳಗ

ಗುರಮೀತ್ ಸಿಂಗ್ ನಿರ್ದೇಶನದ ‘ಮಿರ್ಜಾಪುರ: ದಿ ಮೂವಿ’ಯಲ್ಲಿ ಫ್ರಾಂಚೈಸಿಯ ಹಲವು ಪರಿಚಿತ ಮುಖಗಳು ಮತ್ತೆ ಕಾಣಿಸಿಕೊಂಡಿದ್ದಾರೆ. ಪಂಕಜ್ ತ್ರಿಪಾಠಿ, ಅಲಿ ಫಜಲ್ ಹಾಗೂ ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಜಿತೇಂದ್ರ ಕುಮಾರ್, ರಸಿಕಾ ದುಗ್ಗಲ್, ಶೀಬಾ ಚಡ್ಡಾ, ಅಭಿಷೇಕ್ ಬ್ಯಾನರ್ಜಿ, ಶ್ರಿಯಾ ಪಿಲ್ಗಾಂವ್ಕರ್, ಶ್ವೇತಾ ತ್ರಿಪಾಠಿ, ಹರ್ಷಿತಾ ಗೌರ್, ಸೋನಲ್ ಚೌಹಾಣ್, ರಾಜೇಶ್ ತೈಲಾಂಗ್, ಸುಶಾಂತ್ ಸಿಂಗ್, ಮೋಹಿತ್ ಮಲಿಕ್ ಹಾಗೂ ಕುಲಭೂಷಣ್ ಖರ್ಬಂದಾ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಅಮೆಜಾನ್ MGM ಸ್ಟುಡಿಯೋಸ್ ಮತ್ತು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಚಿತ್ರವನ್ನು ಪ್ರಸ್ತುತಪಡಿಸಿದ್ದು, ರಿತೇಶ್ ಸಿಧ್ವಾನಿ ಹಾಗೂ ಫರ್ಹಾನ್ ಅಖ್ತರ್ ಅವರು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular