HomeLatest Newsಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಾಸಿಕ ಗೌರವಧನಕ್ಕೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಾಸಿಕ ಗೌರವಧನಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿರುವ ನೊಂದಾಯಿತ ಬೌದ್ಧ ವಿಹಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧಮ್ಮಾಚಾರಿಗಳು ಮತ್ತು ಸಹಾಯಕ ಧಮ್ಮಾಚಾರಿಗಳಿಗೆ ಮಾಸಿಕ ಗೌರವಧನವನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಜಿ ನಮೂನೆಯನ್ನು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಬೌದ್ದ ವಿಹಾರ ನೊಂದಣಿ ಪ್ರತಿ, ಆಡಳಿತ ಮಂಡಳಿಯ ಪ್ರತಿ, ಧಮ್ಮಾಚಾರಿಗಳ ಭಾವಚಿತ್ರ, ನಿವಾಸ ದೃಢೀಕರಣ, ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ಪ್ರತಿ, ಸೇವಾ ದೃಢಿಕರಣ ಪತ್ರ ಹಾಗೂ ಧಾರ್ಮಿಕ ವಿದ್ಯಾರ್ಹತೆ ಕುರಿತು ಅಗತ್ಯ ದಾಖಲೆಗಳೊಂದಿಗೆ ಏ.09 ರೊಳಗಾಗಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ:08182-220206, ಅಲ್ಪಸಂಖ್ಯಾತರ ಜಿಲ್ಲಾ ಮಾಹಿತಿ ಕೇಂದ್ರ ಶಿವಮೊಗ್ಗ-7676888388, ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಸೊರಬ-9513815513, ಶಿಕಾರಿಪುರ-7829136724, ಹೊಸನಗರ-9008447029, ಸಾಗರ-7338222907 ಗಳನ್ನು ಸಂಪರ್ಕಿಸುವುದು..

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ

ಶಿವಮೊಗ್ಗ : ನಗರದ ಮಾಚೇನಹಳ್ಳಿಯಲ್ಲಿರುವ 8ನೇ ಪಡೆ, ಕೆ.ಎಸ್.ಆರ್.ಪಿ ಘಟಕದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇಂಗ್ಲಿಷ್ ಶಿಕ್ಷಕರ ಹುದ್ದೆ, 02 ಸಂಖ್ಯೆ, ವಿದ್ಯಾರ್ಹತೆ ಬಿಎ/ಎಂಎ ಮತ್ತು ಬಿಡ್ ಆಗಿರಬೇಕು. ಸಮಾಜ ವಿಜ್ಞಾನ ಶಿಕ್ಷಕರು 02 ಸಂಖ್ಯೆ, ಬಿಎ/ಎಂಎ ಮತ್ತು ಬಿಎಡ್. ನರ್ಸರಿ ಶಿಕ್ಷಕರ ಹುದ್ದೆ 01 ಸಂಖ್ಯೆ, ಎನ್‌ಟಿಟಿ/ಇಸಿಸಿಇ/ಎಂಟಿಟಿ. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ 01 ಸಂಖ್ಯೆ, ಬಿಪಿಎಡ್/ಎಂಪಿಎಡ್. ಸಂಗೀತ ಶಿಕ್ಷಕರ ಹುದ್ದೆ 01 ಸಂಖ್ಯೆ, ಸಂಗೀತದಲ್ಲಿ ಡಿಪ್ಲೊಮಾ ಆಗಿರಬೇಕು.

ಪೂರ್ಣ ಮಾಹಿತಿಯುಳ್ಳ ಅರ್ಜಿಯನ್ನು ಏಪ್ರಿಲ್ 7 ರೊಳಗೆ ಶಾಲೆಯ ಇಮೇಲ್ ವಿಳಾಸ [email protected] ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ : 9480805961, 6363570450 ಗೆ ಕರೆ ಮಾಡಬಹುದು ಎಂದು ಕೆಎಸ್‌ಆರ್‌ಪಿ 8ನೇ ಪಡೆ ಕಮಾಂಡೆAಟ್ ಎಸ್ ಯುವಕುಮಾರ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular