HomeKarnatakaSHOCKING NEWS: ಶಾಲೆಯಲ್ಲಿಯೇ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಶಿಕ್ಷಕ ಅರೆಸ್ಟ್

SHOCKING NEWS: ಶಾಲೆಯಲ್ಲಿಯೇ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಶಿಕ್ಷಕ ಅರೆಸ್ಟ್

ದಾವಣಗೆರೆ: ಮಕ್ಕಳಿಗೆ ಪಾಠ ಹೇಳಿಕೊಟ್ಟು ವಿದ್ಯೆ, ಬುದ್ಧಿ ಮಹತ್ವ ತಿಳಿಸಿಬೇಕಾಗಿದ್ದ ಶಿಕ್ಷಕನೇ ಶಾಲೆಯಲ್ಲಿ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಘೋರ ಘಟನೆ ದಾವಣಗೆರೆ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.

ಕಾಮುಕ ಶಿಕ್ಷಕ ಶಾಲೆಯಲ್ಲಿಯೇ ಬಾಯಲಿಕೆಯ ಮೇಲೆ ಅತ್ಯಾಚಾರ ನಡೆಸಿದ್ದು, ಘಟನೆ ನಡೆದು ವಾರದ ಬಳಿಕ ವಿಷಯ ಬಹಿರಂಗವಾಗಿದೆ. ಸಂತ್ರಸ್ತ ಬಾಲಕಿ ತೀವ್ರ ಅನಾರೋಗ್ಯಕ್ಕೀದಾಗಿದ್ದು, ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರ ನಡೆದುರುವ ಬಗ್ಗೆ ಗೊತ್ತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿಕ್ಷಕನ ಬೆದರಿಕೆಗೆ ಹೆದರಿ ಬಾಲಕಿ ಪೋಷಕರ ಬಳಿಯೂ ಹೇಳದೇ ವಾರದಿಂದ ಸುಮ್ಮನಿದ್ದಳು. ವಿಷಯ ತಿಳಿಯುತ್ತಿದ್ದಂತೆ ಬಾಲಕಿ ಪೋಷಕರು ದಾವಣಗೆರೆ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಾಲೆಯಿಂದಲೇ ಶಿಕ್ಷಕನನ್ನು ಬಂಧಿಸಿ ಕರೆದೊಯ್ದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular