HomeBusinessಮೈಕ್ರೋಸಾಫ್ಟ್​ ಸರ್ವರ್​ ಡೌನ್​: ಆನಂದದಿಂದ ಕುಣಿದಾಡಿದ ಸಿಬ್ಬಂದಿ; ವಿಡಿಯೋ ವೈರಲ್​

ಮೈಕ್ರೋಸಾಫ್ಟ್​ ಸರ್ವರ್​ ಡೌನ್​: ಆನಂದದಿಂದ ಕುಣಿದಾಡಿದ ಸಿಬ್ಬಂದಿ; ವಿಡಿಯೋ ವೈರಲ್​

ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್​​ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್​ ಭಾರತದಲ್ಲಿ ಕೆಲವು ಕಾಲ ಡೌನ್ ಆಗಿತ್ತು. ಟೀಮ್ಸ್​ ಸರ್ವರ್ ಡೌನ್ ಆಗಿರುವ ಬಗ್ಗೆ ಡೌನ್​ಡಿಟೆಕ್ಟರ್ ಸುಮಾರು 3,500ರಷ್ಟು ಮಂದಿ ವರದಿ ಮಾಡಿದ್ದರು. ಲಿಂಕ್ಡ್​ಇನ್ ಸರ್ವರ್ ಕೂಡ ಡೌನ್ ಆಗಿತ್ತು. ಸಮಸ್ಯೆ ಇರುವುದನ್ನು ಮೈಕ್ರೋಸಾಫ್ಟ್ ಒಪ್ಪಿಕೊಂಡಿದೆ.

ಈ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಗಳು ಭಾರಿ ಖುಷಿಯಲ್ಲಿ ಕೆಲವು ಕ್ಷಣ ಕಳೆದಿರುವ ಫೋಟೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕೆಲವು ನಿಮಿಷಗಳ ಆನಂದವನ್ನು ಇವರು ಆಚರಿಸುತ್ತಿದ್ದು, ಅದೀಗ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ತನಿಖೆಗೆ ಆದೇಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಲವರು ಕಂಪೆನಿಗಳು ತಮ್ಮ ಸಿಬ್ಬಂದಿಯನ್ನು ವಜಾಗೊಳಿಸಿರುವ ಬೆನ್ನಲ್ಲೇ ಇರುವ ಉದ್ಯೋಗಿಗಳಿಗೆ ನಾಳಿನ ಚಿಂತೆ ಕಾಡಿದೆ. ಇದರ ನಡುವೆಯೇ ಇಂಥದ್ದೊಂದು ಸೆಲೆಬ್ರೇಷನ್​ ಮಾಡಿ ವೈರಲ್​ ಆಗಿರುವುದು ಸಿಬ್ಬಂದಿಯ ಆತಂಕಕ್ಕೂ ಕಾರಣವಾಗಿದೆ. ಈ ಆನಂದದ ಕ್ಷಣಗಳು ವಿವಿಧ ರೀತಿಯ ಮೀಮ್ಸ್​ಗಳೊಂದಿಗೆ ವೈರಲ್​ ಆಗುತ್ತಿದೆ.

ವಾಸ್ತವವಾಗಿ, ಭಾರತ ಸೇರಿದಂತೆ ಜಾಗತಿಕವಾಗಿ 2023 ರಲ್ಲಿ ದಿನಕ್ಕೆ ಸರಾಸರಿ 1,600 ಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. ಶೇರ್‌ಚಾಟ್, ಓಲಾ, ಸ್ಕಿಟ್.ಐ, ಡಂಜೊ ಸೇರಿದಂತೆ ಹಲವು ಕಂಪೆನಿಗಳು ಇವುಗಳಲ್ಲಿ ಸೇರಿದೆ. ಭಾರತದಲ್ಲಿ ಸುಮಾರು 1,000 ಸೇರಿದಂತೆ ಜಾಗತಿಕವಾಗಿ 18,000 ಉದ್ಯೋಗಿಗಳನ್ನು ವಜಾಗೊಳಿಸಲು ಅಮೆಜಾನ್ ಘೋಷಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular