HomeKarnatakaಫೈನಾನ್ಸ್ ಕಿರುಕುಳಕ್ಕೆ ನೊಂದು ದೂರು ನೀಡಲು ಹೋದ ಮಹಿಳೆಯರಿಗೆ ದಂಡ ವಿಧಿಸಿದ ಪೊಲೀಸರು

ಫೈನಾನ್ಸ್ ಕಿರುಕುಳಕ್ಕೆ ನೊಂದು ದೂರು ನೀಡಲು ಹೋದ ಮಹಿಳೆಯರಿಗೆ ದಂಡ ವಿಧಿಸಿದ ಪೊಲೀಸರು

ಹಾವೇರಿ: ರಾಜ್ಯದಲ್ಲಿ ಫೈನಾನ್ಸ್, ಮೈಕ್ರೋ ಫೈನಾನ್ಸ್ ನವರ ಕಿರುಕುಳಕ್ಕೆ ಬೇಸತ್ತು ಜನರು ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಈ ನಡುವೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದ ಬಗ್ಗೆ ದೂರು ನೀಡಲು ಹೋದ ಮಹಿಳೆಯರಿಗೆ ಪೊಲೀಸರೇ ದಂಡ ವಿಧಿಸಿರುವ ಆರೋಪ ಕೇಳಿಬಂದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಗುಡ್ಡದ ಬೇವಿನಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೈಕ್ರೋ ಫೈನಾನ್ಸ್ ನವರ ಕಾಟದ ಬಗ್ಗೆ ದೂರು ನೀಡಲು ಹೋದ ಇಬ್ಬರು ಮಹಿಳೆಯರಿಗೆ ಪೊಲೀಸ್ ಸಿಬ್ಬಂದಿ ಬೆದರಿಸಿ ದಂಡ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಲಗೇರಿ ಠಾಣೆ ಪೊಲೀಸರು ಈ ರೀತಿ ವರ್ತಿಸುತ್ತಿದ್ದು, ಫೈನನಸ್ ನವರ ಕಿರುಕುಳಕ್ಕೆ ಜನರ ದೂರಿಗೆ ಸ್ಪಂದಿಸಬೇಕಾದ ಪೊಲೀಸರು, ಫೈನಾನ್ಸ್ ನವರ ಪರ ನಿಂತಿದ್ದು, ದೂರು ನೀಡಲು ಹೋದವರಿಂದಲೂ ದಂಡ ವಸೂಲಿ ಮಾಡುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular