ಮೆಟ್ರೋದಲ್ಲಿ ಪ್ರಯಾಣಿಕನ ಹುಚ್ಚಾಟ: ಮೊಟ್ಟೆ ತಿಂದು ಮದ್ಯ ಸೇವಿಸಿದ ಯುವಕ!

ನವದೆಹಲಿ: ಮೆಟ್ರೋದಲ್ಲಿ ಪ್ರಯಾಣಿಸುವ ಕೆಲ ಪ್ರಯಾಣಿಕರು ನಡೆಸುವ ಹುಚ್ಚಾಟ ಅವಾಂತರ ಒಂದೆರೆಡಲ್ಲ. ರೀಲ್ಸ್ ಗಾಗಿಯೋ, ಇನ್ನಾವುದೋ ದುರುದ್ದೇಶಕ್ಕಾಗಿಯೋ ಕೆಲ ಪ್ರಯಾಣಿಕರು ಇಲ್ಲಸಲ್ಲದ ಕಿತಾಪತಿ ಮಾಡುತ್ತಾರೆ. ಅದೇ ರೀತಿ ಇಲ್ಲೋರ್ವ ಪ್ರಯಾಣಿಕ ಮೆಟ್ರೋದಲ್ಲಿ ತೆಪ್ಪಗೆ ಪ್ರಯಾಣಿಸುವುದನ್ನು ಬಿಟ್ಟು ಮೊಟ್ಟೆ ಸೇವಿಸಿ, ಡ್ರಿಂಕ್ ಮಾಡಿ ಪೋಸು ಕೊಟ್ಟಿದ್ದಾನೆ.

ಮೆಟ್ರೋ ರೈಲು ನಿಗಮ ಮೆಟ್ರೋದಲ್ಲಿ ಯವುದೇ ತಿಂಡಿ, ಪಾನೀಯ ಸೇವಿಸದಂತೆ ನಿಯಮ ಮಾಡಿದೆ ಆದಾಗ್ಯೂ ಕೆಲ ಪ್ರಯಾಣಿಕರು ದುರುದ್ದೇಶ ಪೂರ್ವಕವಾಗಿ ಇಂತಹ ಹುಚ್ಚಾತ ಮೆರೆಯುತ್ತಲೇ ಇರುತ್ತಾರೆ.

ದೆಹಲಿ ಮೆಟ್ರೋ ರೈಲಿನಲ್ಲಿ ಯುವಕನೊಬ್ಬ ಪ್ರಯಾಣಿಕರ ಸೀಟ್ ನಲ್ಲಿ ಕುಳಿತು ಆರಾಮವಾಗಿ ಮೊಟ್ಟೆ ಸೇವಿದ್ದಾನೆ. ಸಾಲದ್ದಕ್ಕೆ ಗ್ಲಾಸ್ ನಲ್ಲಿ ಡ್ರಿಂಕ್ ಹಕೈಕೊಂಡು ಮದ್ಯಪಾನ ಮಾಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಪೊಲೀಸರು ಆರೋಪಿ ಯುವಕ ಆಕಾಶ್ ನನ್ನು ಬಂಧಿಸಿದ್ದಾರೆ.

ಕಾರ್ಕಾಡೂಮಾ ಮೆಟ್ರೋ ನಿಲ್ದಾಣದ ಸೀನಿಯರ್ ಸ್ಟೇಷನ್ ಮ್ಯಾನೇಜರ್ ಅಮರ್ ದೇವ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಶಹದಾರಾ ನಿವಾಸಿ ಆಕಾಶ್ ಕುಮಾರ್ ನನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read