ಗುರುಪ್ರಸಾದ್ ಚಿತ್ರದಲ್ಲಿ ‘ಮೀಟೂ ಶೃತಿ’ : ವಿವಾದ ಸೃಷ್ಟಿಸಿದ ‘ರಂಗನಾಯಕ’ ಹಾಡು..!

ಬೆಂಗಳೂರು : ಗುರುಪ್ರಸಾದ್ ಹಾಗೂ ಜಗ್ಗೇಶ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಹೊಸ ಸಿನಿಮಾ ರಂಗನಾಯಕ ಚಿತ್ರದ ಹಾಡೊಂದರಲ್ಲಿ ‘ಮೀಟೂ ಶೃತಿ’ ಎಂಬ ಪದ ಬಳಕೆ ಮಾಡಲಾಗಿದ್ದು, ವಿವಾದ ಸೃಷ್ಟಿಯಾಗಿದೆ.

ರಂಗನಾಯಕ ಸಿನಿಮಾದ ಗಾಳಿ ತಂಗಾಳಿ ಚಿತ್ರದ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಬಿಗ್ ಬಾಸ್ ಶ್ರುತಿ, ಮೀಟೂ ಶ್ರುತಿ ಎಂಬ ಸಾಲು ಬಳಕೆ ಮಾಡಿದ್ದಾರೆ. ಈ ಸಾಲಿನ ಬಗ್ಗೆ ಹಲವರು ಆಕ್ರೋಶ ಹೊರ ಹಾಕಿದ್ದಾರೆ. ಬೇಕಂತಲೇ ಈ ಸಾಲು ಬಳಸಿದ್ದಾರೆ, ಇದು ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮವೊಂದರಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗುರು ಪ್ರಸಾದ್ ಶ್ರುತಿ ಹರಿಹರನ್ ಮೂಲ ಕನ್ನಡಲ್ಲ. ಘಟನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ತಿಳಿಸಿದೆ. ನನ್ನ ಕೋಪ ತೀರಿಸಿಕೊಳ್ಳಲು ನನ್ನ ಮಾಧ್ಯಮ ಸಿನಿಮಾ ಬಳಕೆ ಮಾಡಿದೆ. ಹಾಗಾಗಿ ಬೇಕಂತಲೇ ಮೀಟೂ ಶ್ರುತಿ ಬಳಕೆ ಮಾಡಿದ್ದೇನೆ ಎಂದರು.

ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ಕೊಡೋದರ ಜೊತೆಗೆ ಈ ಒಂದು ಹಾಡನ್ನೂ ಹಾಡಿದ್ದಾರೆ.  ಗಾಳಿ ತಂಗಾಳಿ ಹಾಡಿನಲ್ಲಿ   ಬಿಗ್ ಬಾಸ್ ಶೃತಿ ಮತ್ತು ಮೀಟೂ ಶೃತಿ ಅಂತಲೇ ಜಗ್ಗೇಶ್ ಮಧ್ಯೆ ಡೈಲಾಗ್ ಹೊಡೆಯುತ್ತಾರೆ. ಇದು ಯಾಕೆ ಬೇಕಿತ್ತು ಎಂಬ ಪ್ರಶ್ನೆ ಈಗ ವಿವಾದಕ್ಕೆ ಕಾರಣವಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read