HomeRecipiesರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಮೆಂತೆʼ ಕಷಾಯ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಮೆಂತೆʼ ಕಷಾಯ

 

ಬೆಳಿಗ್ಗೆ ಎಂದಾಕ್ಷಣ ಟೀ, ಕಾಫಿ ಕುಡಿಯುವ ಅಭ್ಯಾಸ ಕೆಲವರಿಗಿರುತ್ತದೆ. ಅಂತಹವರು ಒಮ್ಮೆ ಈ ಮೆಂತೆ ಕಷಾಯ ಮಾಡಿಕೊಂಡು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತೆಪುಡಿ ಮಾಡಿಟ್ಟುಕೊಂಡರೆ ಕೆಲಸ ಸಲೀಸು.

ಬೇಕಾಗುವ ಸಾಮಾಗ್ರಿಗಳು: ¼ ಟೀ ಸ್ಪೂನ್ ಮೆಂತೆಕಾಳು ಪುಡಿ, ಸಣ್ಣ ತುಂಡು ಬೆಲ್ಲ, ನೀರು-1/2 ಕಪ್, ಹಾಲು ½ ಕಪ್.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ: 1 ಕಪ್ ಮೆಂತೆಕಾಳನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ಪುಡಿಮಾಡಿಕೊಳ್ಳಿ.

ನಂತರ ಪಾತ್ರೆಯಲ್ಲಿ ನೀರು ಹಾಕಿ ಅದು ಕುದಿ ಬರುತ್ತಿದ್ದಂತೆ ಬೆಲ್ಲದ ತುಂಡು ಹಾಕಿ ನಂತರ ಮೆಂತೆಕಾಳಿನ ಪುಡಿ ¼ ಟೀ ಚಮಚ ಹಾಕಿ ಚೆನ್ನಾಗಿ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ. ಕಾಯಿಸಿದ ಹಾಲಿಗೆ ಕುದಿಸಿಕೊಂಡ ಮೆಂತೆದ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಆಮೇಲೆ ಕುಡಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular