ಚಳಿಗಾಲದಲ್ಲಿ ಪುರುಷರೂ ಚರ್ಮದ ಆರೈಕೆ ಮಾಡಿಕೊಳ್ಳೋದು ಅಗತ್ಯ

ಚಳಿ ಶುರುವಾಗಿದೆ. ಚರ್ಮದ ಆರೈಕೆ ಚಳಿಗಾಲದಲ್ಲಿ ಅತಿ ಮುಖ್ಯ. ಹುಡುಗಿಯರು ಚಳಿಗಾಲವಿರಲಿ ಮಳೆಗಾಲವಿರಲಿ ಚರ್ಮದ ಆರೈಕೆ ಮಾಡಿಕೊಳ್ತಾರೆ.

ಆದ್ರೆ ಪುರುಷರು ಚರ್ಮದ ಆರೈಕೆಗೆ ಹೆಚ್ಚು ಮಹತ್ವ ನೀಡೋದಿಲ್ಲ. ಇದೇ ಕಾರಣಕ್ಕೆ ಚರ್ಮ ಸಂಬಂಧಿ ಸಮಸ್ಯೆಗೊಳಗಾಗ್ತಾರೆ. ಹಾಗಾಗಿ ಪುರುಷರು ಕೂಡ ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡಿಕೊಳ್ಳೋದು ಅಗತ್ಯ.

ಸನ್ ಸ್ಕ್ರೀನ್: ಮನೆಯಿಂದ ಹೊರಗೆ ಹೋಗುವ ಮೊದಲು ಸನ್ ಸ್ಕ್ರೀನ್ ಬಳಸಿ. ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ಇದು ನೆರವಾಗುತ್ತದೆ.

ಚಾರ್ಕೋಲ್ ಫೇಸ್ ವಾಶ್ ಬಳಸಿ: ಚಾರ್ಕೋಲ್ ಫೇಸ್ ವಾಶ್ ಚರ್ಮದಲ್ಲಿರುವ ಕೊಳಕನ್ನು  ಹೊರಹಾಕುತ್ತದೆ. ಫೇಸ್ ವಾಶ್ ಜೊತೆ ನೀವು ಚಾರ್ಕೋಲ್ ಸ್ಕ್ರಬ್ ಹಾಗೂ ಕ್ರೀಂ ಕೂಡ ಬಳಸಬಹುದು.

ಚರ್ಮದ ಆರೋಗ್ಯ ಕಾಪಾಡಲು ಆಗಾಗ ಮುಖವನ್ನು ತೊಳೆಯುತ್ತಿರಬೇಕು. ಹೊರಗಿನಿಂದ ಮನೆಗೆ ಬಂದ ಮೇಲೆ ತಕ್ಷಣ ಮುಖವನ್ನು ನೀರಿನಲ್ಲಿ ತೊಳೆಯಿರಿ. ಮುಖವನ್ನು ಸ್ವಚ್ಛಗೊಳಿಸುವುದ್ರಿಂದ ಚರ್ಮದ ಮೇಲಿರುವ ಕೊಳಕು ಹೊರ ಹೋಗುತ್ತದೆ.

ಶುಷ್ಕ ಚರ್ಮ ಹೊಂದಿರುವ ಹುಡುಗ್ರು ಮಾಯಿಶ್ಚರೈಸರ್ ಕ್ರೀಂ ಹಚ್ಚಿ. ಇದು ಚರ್ಮದ ಆರೋಗ್ಯ ಕಾಪಾಡುವ ಜೊತೆಗೆ ಚರ್ಮ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read