HomeEntertainment'ಬಿಟಿಎಸ್' ಚಿತ್ರದ ಮೆಲೋಡಿ ಹಾಡು ರಿಲೀಸ್

‘ಬಿಟಿಎಸ್’ ಚಿತ್ರದ ಮೆಲೋಡಿ ಹಾಡು ರಿಲೀಸ್

ಐದು ಪ್ರತಿಭಾವಂತ ನಿರ್ದೇಶಕರು ಆಕ್ಷನ್ ಕಟ್ ಹೇಳಿರುವ ‘ಬಿಟಿಎಸ್’ ಇನ್ನೇನು ತೆರೆ ಮೇಲೆ ಬರಲಿದ್ದು, ಚಿತ್ರತಂಡ ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ಈ ಚಿತ್ರದ ‘ನೀನೇ’ ಎಂಬ ಮೆಲೋಡಿ ಹಾಡು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರಿಂದ   ಮೆಚ್ಚುಗೆಯ ಸುರಿಮಳೆಯೇ ಹರಿದು ಬಂದಿದೆ. ಐಶ್ವರ್ಯ ರಂಗ ರಾಜನ್ ಹಾಗೂ ಕೀರ್ತನ್ ಹೊಳ್ಳ  ಧ್ವನಿಯಾಗಿದ್ದು, ಅಪರಿಜಿತ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಕಿರಣ್ ಕಾವೇರಪ್ಪ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಜಹಾಂಗೀರ್ ಸೇರಿದಂತೆ ವಿಜಯ್ ಕೃಷ್ಣ, ಆಹಾನ್, ಮೇದಿನಿ ಕೆಳಮನೆ, ವಿನಯ್ ಭಟ್, ಯುವರಾಜ್, ಕೌಶಿಕ್ ಗೌಡ, ಚಂದನ ಕಶ್ಯಪ್, ಮಹದೇವ ಪ್ರಸಾದ್, ಶ್ರೀ ಪ್ರಿಯಾ ಬಣ್ಣ ಹಚ್ಚಿದ್ದು,  ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್ ಶಂಕಧ್, ಅಪೂರ್ವ ಭಾರದ್ವಾಜ್ ನಿರ್ದೇಶಿಸುವ ಮೂಲಕ ನಿರ್ಮಾಣದ ಜವಾಬ್ದಾರಿ  ಹೊತ್ತಿದ್ದಾರೆ. ಅಶ್ವಿನ್ ಕೆನಡಿ, ಗಣೇಶ್ ಮಹಾಬಲ, ಸಂಜಯ್ ಪ್ರೇಮಾನಂದ್ ಅವರ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular