ಬೆಕ್ಕು, ನಾಯಿಯ ಬದಲು ಪುಟ್ಟ ಹಂದಿ ಸಾಕಿ ವೈರಲ್​ ಆಗ್ತಿದ್ದಾಳೆ ಈ ಯುವತಿ

ಸಾಕು ಪ್ರಾಣಿಗಳು ಎಂದಾಕ್ಷಣ ಬೆಕ್ಕು, ನಾಯಿ, ಮೊಲ ಹೀಗೆ ನೆನಪಿಗೆ ಬರುತ್ತದೆ. ಆದರೆ ಇಲ್ಲೊಬ್ಬ ಯುವತಿ ಹಂದಿಯನ್ನು ಸಾಕಿ ಸುದ್ದಿಯಲ್ಲಿದ್ದಾಳೆ. ಹಂದಿ ಸಾಕಾಣಿಕೆ ಮಾಡುವವರು ಕಾಣಸಿಗುತ್ತಾರೆ. ಅದರೆ ಕ್ಯಾಲಿಫೋರ್ನಿಯಾದ ಈ ಯುವತಿ ಸಾಕಾಣಿಕೆಗಾಗಿ ಹಂದಿ ಸಾಕುತ್ತಿಲ್ಲ. ಬದಲಿಗೆ ನಾಯಿ, ಬೆಕ್ಕುಗಳ ಬದಲು ಹಂದಿ ಸಾಕುತ್ತಿದ್ದಾಳೆ. ಹಂದಿಯ ಜೊತೆ ಒಂದೇ ಹಾಸಿಗೆಯ ಮೇಲೆ ಮಲಗುತ್ತಾಳೆ. ಇದು ವಿಶಿಷ್ಟ ತಳಿಯ ಪುಟ್ಟ ಹಂದಿಯಾಗಿದೆ.

25 ವರ್ಷದ ಮಿನಾ ಅಲಾಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಫಾರ್ಮ್‌ನಿಂದ ಹಂದಿಮರಿಯನ್ನು ಖರೀದಿಸಿದಳು, ಅದಕ್ಕೆ ಅವಳು ಮೆರ್ಲಿನ್ ಎಂದು ಹೆಸರಿಸಿದ್ದಳು. ಮಿನಾ ಮೆರ್ಲಿನ್ ಜೊತೆ ಬಾಂಧವ್ಯ ಹೊಂದಿದ್ದಾರೆ. ವಿಯೆಟ್ನಾಮೀಸ್ ಹಂದಿಯ ತೂಕ ಸುಮಾರು 15 ಕೆಜಿ ಮತ್ತು ಇದು 3 ಅಡಿ ಉದ್ದವಿದೆ.

ಹಂದಿಯನ್ನು ಸಾಯುವವರೆಗೂ ಪ್ರೀತಿಸುತ್ತೇನೆ ಮತ್ತು ಮುದ್ದಾಡುತ್ತೇನೆ ಎಂದಿದ್ದಾಳೆ ಯುವತಿ. ಎಲೆಕ್ಟ್ರಿಕ್ ಬಟನ್‌ಗಳನ್ನು ಆನ್ ಮತ್ತು ಆಫ್ ಮಾಡಲು ಮಿನಾ ಮೆರ್ಲಿನ್‌ಗೆ ತರಬೇತಿ ನೀಡಿದ್ದಾಳೆ. ಇದರ ಹೊರತಾಗಿ, ನೃತ್ಯ ಮಾಡಲು, ಹೈ ಫೈವ್ ಅನ್ನು ಪ್ರದರ್ಶಿಸಲು ಕಲಿಸಿದ್ದಾಳೆ. ಮಿನಾ ಅವರ ಟಿಕ್‌ಟಾಕ್ ಖಾತೆಯಲ್ಲಿ ಹಂದಿಯ ವಿಡಿಯೋ ಪೋಸ್ಟ್​ ಮಾಡುತ್ತಿದ್ದು, ಇದು ನೆಟ್ಟಿಗರ ಪ್ರಶಂಸೆ ಗಳಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read