
ಪ್ರಸ್ತುತ ದೇಶದಲ್ಲಿ ಟೊಮ್ಯಾಟೋ ಬೆಲೆಯು ಗಗನಕ್ಕೇರಿದೆ. ಬೆಳೆಯ ಗುಣಮಟ್ಟ, ಕೊರತೆ. ದಾಸ್ತಾನು ಸಮಸ್ಯೆ ಹೀಗೆ ನಾನಾ ಕಾರಣಗಳಿಂದಾಗಿ ದೆಹಲಿ , ಕೋಲ್ಕತ್ತಾ ಹಾಗೂ ಉತ್ತರ ಪ್ರದೇಶಗಳಂತಹ ನಗರಗಳಲ್ಲಿ ಟೊಮ್ಯಾಟೋ ಬೆಲೆ ಪ್ರತಿ ಕೆಜಿಗೆ 150 ರೂಪಾಯಿ ಆಗಿದೆ.
ಉತ್ತರ ಭಾರತ ಹಾಗೂ ಪೂರ್ವ ಭಾರತದ ಮೆಕ್ಡೊನಾಲ್ಡ್ ಮಳಿಗೆಗಳಲ್ಲಿ ಮಾತ್ರ ಇನ್ಮೇಲೆ ನಿಮಗೆ ಮೆಕ್ಡಿ ಉತ್ಪನ್ನಗಳಲ್ಲಿ ಟೊಮ್ಯಾಟೋ ಇರೋದಿಲ್ಲ. ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿಯು, ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಉನ್ನತ ಮಟ್ಟದಲ್ಲಿ ಇಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದೆ.
ನಮ್ಮ ಸಾಕಷ್ಟು ಪ್ರಯತ್ನದ ಹೊರತಾಗಿಯೂ ಉತ್ತಮ ಗುಣಮಟ್ಟದ ಟೊಮ್ಯಾಟೋಗಳನ್ನು ಹೊಂದಲು ನಮಗೆ ಸಾಧ್ಯವಾಗಲಿಲ್ಲ. ಇದೊಂದು ತಾತ್ಕಾಲಿಕ ಸಮಸ್ಯೆಯಾಗಿದೆ ಎಂದು ಗ್ರಾಹಕರಿಗೆ ಮೆಕ್ಡಿ ಕಂಪನಿ ತಿಳಿಸಿದೆ.

