HomeIndiaಗ್ರೇಟರ್ ನೋಯ್ಡಾದ ಗೌರ್ ನಗರದಲ್ಲಿ ಭೀಕರ ಅಗ್ನಿ ಅವಘಡ! Watch video

ಗ್ರೇಟರ್ ನೋಯ್ಡಾದ ಗೌರ್ ನಗರದಲ್ಲಿ ಭೀಕರ ಅಗ್ನಿ ಅವಘಡ! Watch video

ಗ್ರೇಟರ್ ನೋಯ್ಡಾ ಪಶ್ಚಿಮದ ಗೌರ್ ಸಿಟಿ -2 ರ ಫ್ಲ್ಯಾಟ್‌ ನಲ್ಲಿ ಇಂದು ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಕಟ್ಟಡ ಹೊತ್ತಿ ಉರಿದಿರುವ ಘಟನೆ ನಡೆದಿದೆ.

ಅದೃಷ್ಟವಶಾತ್, ಬೆಂಕಿ ಹರಡುವ ಮೊದಲು ಫ್ಲ್ಯಾಟ್ನಲ್ಲಿದ್ದ ಜನರು ಸುರಕ್ಷಿತವಾಗಿ ಹೊರಬಂದರು. ಅಗ್ನಿಶಾಮಕ ಇಲಾಖೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಗೌರ್ ಸಿಟಿ -2 ರಲ್ಲಿರುವ ಗೌರ್ ಸಿಟಿ -2 ರ 16 ಅವೆನ್ಯೂದಲ್ಲಿ ಭೀಕರ ಬೆಂಕಿಯಿಂದಾಗಿ ಫ್ಯಾಟ್‌ ನಲ್ಲಿ ಗೊಂದಲ ಉಂಟಾಯಿತು. ಈ ಮೊದಲು ಇದ್ದ ಫ್ಲಾಟ್ ನಿಂದ ಎರಡನೇ ಫ್ಲಾಟ್ ಗೆ ಬೆಂಕಿ ಹರಡಿದೆ. ಎರಡು ಫ್ಲ್ಯಾಟ್ ಗಳಿಂದ ಹೊಗೆಯಿಂದಾಗಿ ಕೆಲವರಿಗೆ ಉಸಿರಾಟದ ತೊಂದರೆ ಉಂಟಾಯಿತು. ಜನರು ಬೇಗನೆ ಕೆಳಗಿಳಿದರು.

ಅದೃಷ್ಟವಶಾತ್, ಫ್ಲ್ಯಾಟ್ನಲ್ಲಿ ಸಿಕ್ಕಿಬಿದ್ದ ಕುಟುಂಬವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular