HomeLatest NewsBIG UPDATE : ‘ಸ್ವಿಟ್ಜರ್ಲ್ಯಾಂಡ್’ನಲ್ಲಿ ಭೀಕರ ಸ್ಪೋಟ : 47 ಮಂದಿ ಸಜೀವ ದಹನ, ಭಯಾನಕ...

BIG UPDATE : ‘ಸ್ವಿಟ್ಜರ್ಲ್ಯಾಂಡ್’ನಲ್ಲಿ ಭೀಕರ ಸ್ಪೋಟ : 47 ಮಂದಿ ಸಜೀವ ದಹನ, ಭಯಾನಕ ವೀಡಿಯೋ ವೈರಲ್ |WATCH VIDEO

ಸ್ವಿಟ್ಜರ್ಲ್ಯಾಂಡ್ : ಸ್ವಿಸ್ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಜನದಟ್ಟಣೆಯ ಬಾರ್ನಲ್ಲಿ ಸಂಭವಿಸಿದ ಭೀಕರ ಸ್ಪೋಟ-ಅಗ್ನಿ ದುರಂತದಲ್ಲಿ ಸುಮಾರು 47 ಜನರು ಸಾವನ್ನಪ್ಪಿದ್ದುಕನಿಷ್ಠ 115 ಜನರು ಗಾಯಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವರ್ಷವನ್ನು ಸ್ವಾಗತಿಸುವ ಜನರಿಂದ ತುಂಬಿದ್ದ ಐಷಾರಾಮಿ ಆಲ್ಪೈನ್ ಸ್ಕೀ ರೆಸಾರ್ಟ್ನಲ್ಲಿರುವ ಜನಪ್ರಿಯ ಬಾರ್ ಲೆ ಕಾನ್ಸ್ಟೆಲೇಷನ್ನಲ್ಲಿ ಸ್ಥಳೀಯ ಸಮಯ ಸುಮಾರು 1:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಪರಿಣಾಮ ಹಲವರು ಸುಟ್ಟು ಕರಕಲಾದರು ಹಾಗೂ ಹಲವರು ಗಂಭೀರವಾಗಿ ಗಾಯಗೊಂಡರು.

ಘಟನೆಯನ್ನು ಭಯೋತ್ಪಾದಕ ದಾಳಿಯಲ್ಲ ಎಂದು ಸ್ವಿಸ್ ಅಧಿಕಾರಿಗಳು ಹೇಳಿದ್ದಾರೆ. ಸ್ಫೋಟದ ಸಮಯದಲ್ಲಿ ಬಾರ್ನಲ್ಲಿ 150ಕ್ಕೂ ಹೆಚ್ಚು ಜನರು ಇದ್ದರು. ಸ್ಫೋಟ ಸಂಭವಿಸಿದ ಬಳಿಕ ಕಟ್ಟಡ ಬೆಂಕಿಗಾಹುತಿಯಾಗಿರುವುದು ಕಂಡುಬಂದಿದೆ. ಸ್ಫೋಟದ ಕಾರಣದ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.ಸಂಗೀತ ಕಾರ್ಯಕ್ರಮದ ಸಮಯದಲ್ಲಿ ಪಟಾಕಿ ಸಿಡಿಸಿದ್ದರಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ಸ್ವಿಸ್ ಮಾಧ್ಯಮಗಳು ಅಂದಾಜಿಸಿದೆ. ಆದರೆ ಸ್ಪೋಟಕ್ಕೆ ಕಾರಣ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular