HomeIndiaBREAKING: ಚಲಿಸುತ್ತಿದ್ದ ಟಾಟಾ ಸುಮೋ ಮೇಲೆ ಉರುಳಿ ಬಿದ್ದ ಬೃಹತ್ ಬಂಡೆ: 13 ಜನರು ದುರ್ಮರಣ

BREAKING: ಚಲಿಸುತ್ತಿದ್ದ ಟಾಟಾ ಸುಮೋ ಮೇಲೆ ಉರುಳಿ ಬಿದ್ದ ಬೃಹತ್ ಬಂಡೆ: 13 ಜನರು ದುರ್ಮರಣ

ಚಂಬಾ: ಚಲಿಸುತ್ತಿದ್ದ ಟಾಟಾ ಸುಮೋ ವಾಹನದ ಮೇಲೆ ಬೃಹತ್ ಬಂಡೆಯೊಂದು ಉರುಳಿ ಬಿದ್ದ ಪರಿಣಾಮ 13 ಜನರು ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.

ಕೆಲ ದಿನಗಳಿಂದ ಸುರುಯುತ್ತಿದ್ದ ಧಾರಾಕಾರ ಮಳೆಯಿಂದಾಗಿ ಚಂಬಾ ಜಿಲ್ಲೆಯ ಹಲವೆಡೆ ಭೂಕುಸಿತವುಂಟಾಗಿತ್ತು. ಇಂದು ಕಿಲ್ಲರ್-ಉದಯಪುರ ರಸ್ತೆಯ ಕಾಡುನಲ್ಲಾ ಪ್ರದೇಶದಲ್ಲಿ ಟಾಟಾ ಸುಮೋ ಮೇಲೆ ಬೃಹತ್ ಗಾತ್ರದ ಬಂಡೆ ಬಿದ್ದಿದೆ. ವಾಹನ ಸಂಪೂರ್ಣ ಅಪ್ಪಚ್ಚಿಯಾಗಿದೆ. ಘಟನಾ ಸ್ಥಳದಲ್ಲೇ 13 ಜನರು ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ನಂತರ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಯಿತು. ಅಧಿಕಾರಿಗಳು ಪ್ರಸ್ತುತ ಅವಶೇಷಗಳನ್ನು ತೆರವುಗೊಳಿಸಲು ಮತ್ತು ನಜ್ಜುಗುಜ್ಜಾದ ವಾಹನದಿಂದ ಶವಗಳನ್ನು ಹೊರತೆಗೆಯಲು ಕೆಲಸ ಮಾಡುತ್ತಿದ್ದಾರೆ. ಟಾಟಾ ಸುಮೋದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಜುಲೈ 23ರಿಂದ 26ರವರೆಗೆ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.

ಇನ್ನು ಜುಲೈ 27 ರಿಂದ 29 ರವರೆಗೆ ಮಳೆ ಅಬ್ಬರ ಇನ್ನಷ್ಟು ಜೋರಾಅಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular