ಬೆಂಗಳೂರು: ರಾಜ್ಯದಲ್ಲಿ ನಡೆಯುವ ಸಾಮೂಹಿಕ ವಿವಾಹಗಳಿಗೆ (Mass Marriages) ಸಂಬಂಧಿಸಿದಂತೆ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ನಕಲಿ ದಾಖಲಾತಿಗಳನ್ನು ತಡೆಯಲು ಸರ್ಕಾರ ಕಡ್ಡಾಯ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇದರ ಭಾಗವಾಗಿ, ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಸಂಘಟಕರು/ಸಂಸ್ಥೆಗಳು ಭರ್ತಿ ಮಾಡಬೇಕಾದ ಅಧಿಕೃತ “ನಮೂನೆ-2” (Form-2) ಪ್ರಮಾಣಪತ್ರದ ವಿವರಗಳು ಲಭ್ಯವಾಗಿವೆ.
ಸಾಮೂಹಿಕ ವಿವಾಹಗಳು ಅಧಿಕೃತವಾಗಿ ನಡೆದಿವೆ ಎಂಬುದನ್ನು ಖಚಿತಪಡಿಸಲು ಸಂಘಟನಾಕಾರರು ಈ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಪ್ರಮಾಣಪತ್ರದಲ್ಲಿ ಏನೇನಿದೆ? (ಪ್ರಮುಖ ವಿವರಗಳು)
ಸಂಘಟನಾಕಾರರು ನೀಡಬೇಕಾದ ಈ ಪ್ರಮಾಣಪತ್ರದಲ್ಲಿ ವಧು-ವರರ ವೈಯಕ್ತಿಕ ವಿವರಗಳು ಹಾಗೂ ವಿವಾಹದ ಕಾನೂನುಬದ್ಧತೆಯನ್ನು ದೃಢೀಕರಿಸುವ ಪ್ರಮುಖ ಅಂಶಗಳನ್ನು ಒಳಗೊಂಡಿದೆ:
ಸಂಘಟಕರ ಜವಾಬ್ದಾರಿ: “ಅರ್ಜಿಯಲ್ಲಿ ನೀಡಿರುವ ಎಲ್ಲಾ ವಿವರಗಳು ನನ್ನ ತಿಳುವಳಿಕೆ ಮತ್ತು ನಂಬಿಕೆಗೆ ಸತ್ಯವಾಗಿದೆ” ಎಂದು ಜಂಟಿ ಸಂಘಟನಾಕಾರರು ಸ್ಥಳ ಮತ್ತು ದಿನಾಂಕದೊಂದಿಗೆ ಸಹಿ ಹಾಗೂ ಪೂರ್ಣ ಹೆಸರನ್ನು ನಮೂದಿಸಿ ಪ್ರಮಾಣೀಕರಿಸಬೇಕಾಗುತ್ತದೆ.
ಈ ನಿಯಮದ ಉದ್ದೇಶವೇನು?
ಬಾಲ್ಯವಿವಾಹ ತಡೆಗಟ್ಟುವುದು, ಸರ್ಕಾರದ ವಿವಿಧ ಯೋಜನೆಗಳಡಿ (ಉದಾಹರಣೆಗೆ ಸಪ್ತಪದಿ ಅಥವಾ ಇತರೆ ಪ್ರೋತ್ಸಾಹ ಧನ ಯೋಜನೆಗಳು) ಸಿಗುವ ಸೌಲಭ್ಯಗಳು ದುರುಪಯೋಗವಾಗದಂತೆ ನೋಡಿಕೊಳ್ಳುವುದು ಮತ್ತು ಸಾಮೂಹಿಕ ವಿವಾಹಗಳ ಹೆಸರಿನಲ್ಲಿ ನಡೆಯುವ ವಂಚನೆಗಳಿಗೆ ಬ್ರೇಕ್ ಹಾಕುವುದು ಈ ಕಡ್ಡಾಯ ನಮೂನೆಯ ಮುಖ್ಯ ಉದ್ದೇಶವಾಗಿದೆ.


