HomeLatest Newsಮಾರ್ಕ್ ವಿಮರ್ಶೆ: ಅಭಿಮಾನಿಗಳಿಗೆ ಫುಲ್ ಮೀಲ್ಸ್, ಸಾಮಾನ್ಯ ಪ್ರೇಕ್ಷಕನಿಗೆ ಇನ್ನೂ ಏನೋ ಬೇಕಿತ್ತು!

ಮಾರ್ಕ್ ವಿಮರ್ಶೆ: ಅಭಿಮಾನಿಗಳಿಗೆ ಫುಲ್ ಮೀಲ್ಸ್, ಸಾಮಾನ್ಯ ಪ್ರೇಕ್ಷಕನಿಗೆ ಇನ್ನೂ ಏನೋ ಬೇಕಿತ್ತು!

ಮಾರ್ಕ್.. ಇಂದು ( ಡಿಸೆಂಬರ್ 25 ) ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ನ ಸತತ ಎರಡನೇ ಚಿತ್ರ. ಕಳೆದ ಡಿಸೆಂಬರ್‌ನಲ್ಲಿ ಮ್ಯಾಕ್ಸ್ ಮಾಡಿ ಗೆದ್ದಿದ್ದ ಈ ಜೋಡಿ ಇದೀಗ ಮಾರ್ಕ್ ಮೂಲಕ ಸಿನಿ ರಸಿಕರ ಮುಂದೆ ಬಂದಿದೆ.

ಇನ್ನು ಮ್ಯಾಕ್ಸ್ ಹಾಗೂ ಮಾರ್ಕ್ ಎರಡೂ ಚಿತ್ರಗಳನ್ನೂ ಹೋಲಿಸಿದರೆ ಬಹುತೇಕ ಸಾಮ್ಯತೆಗಳಿವೆಯಾದರೂ ಮಾರ್ಕ್ ತುಸು ವಿಭಿನ್ನ ಹಾಗೂ ಆಯ್ಕೆ ಮಾಡಿಕೊಂಡಿರುವ ವಿಷಯದಲ್ಲಿ ತುಸು ಮುಂದೆ ಇದೆ ಎನ್ನಬಹುದು. ಆದರೆ ನಿರ್ದೇಶಕರು ಅಭಿಮಾನಿಗಳನ್ನು ಮನಸಿನಲ್ಲಿಟ್ಟುಕೊಂಡು ಬರೆದಿರುವ ಬರವಣಿಗೆ ಸಾಮಾನ್ಯ ಪ್ರೇಕ್ಷಕನಿಗೂ ಸಿಗಬಹುದಾಗಿದ್ದ ಫುಲ್‌ಮೀಲ್ಸ್ ಅನ್ನು ಕೈತಪ್ಪಿಸಿದೆ ಎಂದರೆ ತಪ್ಪಾಗಲಾರದು.

ಚಿತ್ರದ ಆರಂಭದಲ್ಲೇ ನೇರವಾಗಿ ಕಥೆಗೆ ಇಳಿಯುವ ನಿರ್ದೇಶಕ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಷ್ಟವಾಗುವ ಎಂಟ್ರಿ, ಫೈಟ್, ಡಾನ್ಸ್ ಎಲ್ಲವನ್ನೂ ಅಚ್ಚುಕಟ್ಟಾಗಿ ಇರುವಂತೆ ನೋಡಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಬಿಟ್ಟುಕೊಟ್ಟಿರುವ ಹಾಗೆ ಒಂದೇ ದಿನ ೧೮ ಮಕ್ಕಳ ಅಪಹರಣವಾಗುತ್ತೆ. ಹೀಗೆ ಅಪಹರಣಕ್ಕೊಳಗಾದ ಮಕ್ಕಳನ್ನು ರಾಜಕೀಯ ಕುತಂತ್ರ, ಯಾವುದೇ ಡೀಲ್ ಮಾಡಿದರೂ ಕೊಲೆಯೇ ಅಸ್ತ್ರ ಎನ್ನುವ ಡಾನ್‌ಗಳ ಸವಾಲಿನ ನಡುವೆ ನಾಯಕ ವಾಪಸ್ ತರುತ್ತಾನಾ ಎನ್ನುವುದೇ ಚಿತ್ರದ ಒನ್‌ಲೈನ್ ಸ್ಟೋರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಚಿತ್ರದಲ್ಲಿ ನಾಯಕ ಮಾರ್ಕ್ ( ಅಜಯ್ ಮಾರ್ಕಂಡೇಯ ) ಅಮಾನತ್ತಾದ ಎಸ್‌ಪಿ. ಅಮಾನತ್ತಾದರೂ ಕರ್ತವ್ಯ ಮಾಡುತ್ತೇನೆ ಎಂಬ ನಿಷ್ಠೆ ಇರುವ ಮಾರ್ಕ್‌ಗೆ ಮಕ್ಕಳ ಅಪಹರಣ ಪ್ರಕರಣ ಸವಾಲಾಗಿ ಪರಿಣಮಿಸುತ್ತದೆ. ಮುಖ್ಯಮಂತ್ರಿ ಆಕಾಂಕ್ಷೆಯನ್ನು ಹೊಂದಿರುವ ರಾಜಕಾರಣಿಯ ಗುಟ್ಟೊಂದು ಮಕ್ಕಳ ಅಪಹರಣ ಪ್ರಕರಣಕ್ಕೆ ತಳುಕು ಹಾಕಿಕೊಳ್ಳುವ ಕಾರಣ ಮಾರ್ಕ್ ಹಾಗೂ ಆ ರಾಜಕಾರಣಿ ನಡುವಿನ ಕಿತ್ತಾಟಕ್ಕೆ ಎಡೆ ಮಾಡಿಕೊಡುತ್ತದೆ.

ನಾಯಕನಾಗಿ ಸುದೀಪ್ ಅಬ್ಬರಿಸಿದ್ದು, ಅವರ ಅಭಿನಯ, ದೊರಕಿರುವ ಪಾತ್ರ ಎಲ್ಲವೂ ಕ್ಲಿಕ್ ಆಗಿದೆ. ಆದರೆ ನಾಯಕನನ್ನು ಅದ್ದೂರಿಯಾಗಿ ತೋರಿಸುವ ಯತ್ನದಲ್ಲಿ ನಿರ್ದೇಶಕ ಎಮೋಷನ್ ಭಾಗವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿಯೇ ಪ್ರೇಕ್ಷಕರನ್ನು ಎಮೋಷನಲ್ ಆಗಿಸಬೇಕಿದ್ದ ಹಲವು ದೃಶ್ಯಗಳು ಕ್ಲಿಕ್ ಆಗಿಲ್ಲ. ಇನ್ನೂ ಕೆಲ ದೃಶ್ಯಗಳಲ್ಲಿ ನಿರ್ದೇಶಕರೇ ಪ್ರೇಕ್ಷಕರನ್ನು ಎಮೋಷನಲ್ ಮಾಡಿಸುವ ಅವಕಾಶವಿದ್ದರೂ ಅದರ ಪ್ರಯತ್ನವನ್ನೇ ಮಾಡಿಲ್ಲ. ಚಿತ್ರಕಥೆ ವೇಗವಾಗಿ ಸಾಗಿದರೂ ಎಮೋಷನಲ್ ಟಚ್ ಇಲ್ಲದಿರುವುದು ಕ್ಲೈಮ್ಯಾಕ್ಸ್‌ಗೆ ಬೇಕಾದ ಕುತೂಹಲ ಗಟ್ಟಿಯಾಗಿ ಹುಟ್ಟುವುದಿಲ್ಲ. ಈ ಅಂಶವೇ ಇನ್ನೂ ಏನೋ ಬೇಕಿತ್ತು ಎನ್ನುವ ಅನುಭವ ನೀಡಲಿದೆ.

ಎಮೋಷನಲ್ ಟಚ್ ಇಲ್ಲದಿದ್ದರೂ ಪರವಾಗಿಲ್ಲ ಚಿತ್ರದ ಕಥೆ ವೇಗವಾಗಿ, ಮಾಸ್ ಆಗಿ ಸಾಗಿದರೆ ಸಾಕು ಎನ್ನುವ ಪ್ರೇಕ್ಷಕರಿಗೆ ಮಾರ್ಕ್ ಇಷ್ಟವಾಗಲಿದ್ದಾನೆ. ಒಟ್ಟಾರೆ ಮಾರ್ಕ್ ಕೊಡುವ ಕಾಸಿಗೆ ಬೇಕಾದ ಮನರಂಜನೆ ನೀಡುವಲ್ಲಿ ಮೋಸ ಮಾಡಲ್ಲ, ಒಂದೊಮ್ಮೆ ನೋಡಬಹುದು ಎಂದು ಗ್ಯಾರಂಟಿಯಾಗಿ ಹೇಳಬಹುದು.

ಸುದೀಪ್ ಈ ಚಿತ್ರದಲ್ಲೂ ಸಹ ಅಭಿನಯ ಚಕ್ರವರ್ತಿಯಾಗಿದ್ದು, ಉಳಿದ ಪಾತ್ರಧಾರಿಗಳು ತಮಗೆ ಸಿಕ್ಕ ಅವಕಾಶಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಸಂಗೀತ ನಿರ್ದೇಶನ ಸಿನಿಮಾಗೆ ತಕ್ಕನಾಗಿದ್ದು, ಛಾಯಾಗ್ರಹಣ ಹಾಗೂ ಸಂಕಲನ ಅಚ್ಚುಕಟ್ಟಾಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular