HomeKarnatakaBREAKING: ಉದ್ಯಮಿಗೆ ಕಾಂಗ್ರೆಸ್ ಮುಖಂಡನಿಂದ ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್: 2 ಕೋಟಿ 77 ಲಕ್ಷ ಹಣ...

BREAKING: ಉದ್ಯಮಿಗೆ ಕಾಂಗ್ರೆಸ್ ಮುಖಂಡನಿಂದ ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್: 2 ಕೋಟಿ 77 ಲಕ್ಷ ಹಣ ದೋಚಿದ ಖದೀಮರು

ಮಂಗಳೂರು: ಉದ್ಯಮಿಯೊಬ್ಬರನ್ನು ಯುವ ಕಾಂಗ್ರೆಸ್ ಮುಖಂಡನೊಬ್ಬ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಬ್ಲ್ಯಾಕ್ ಮೇಲ್ ಮಾಡಿ ಬರೋಬ್ಬರಿ 2 ಕೋಟಿ 77 ಲಕ್ಷ ರೂಪಾಯಿ ಹಣ ದೋಚಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಜಾಮ್ ಹಾಗೂ ಜಿತೇಶ್ ಎಂಬುವವರು ಉದ್ಯಮಿಗೆ ಹನಿಟ್ರ್ಯಾಪ್ ಮಾಡಿ, ಅಶ್ಲೀಲ ಫೋಟೋ, ವಿಡಿಯೋ ಇಟ್ಟುಕೊಂಡು ಪತ್ನಿಗೆ ತೋರಿಸುವುದಾಗಿ ಹೇಳಿ ಮೊದಲು 35 ಲಕ್ಷ ಹಣ ಪಡೆದಿದ್ದಾರೆ. ಬಳಿಕ ಹಂತ ಹಂತವಾಗಿ ಬ್ಲ್ಯಾಕ್ ಮೇಲ್ ಮುಂದುವರೆಸಿದ ಖದೀಮರು ಬರೋಬ್ಬರಿ 2 ಕೋಟಿ 77 ಲಕ್ಷ ಹಣ ಪೀಕಿದ್ದಾರೆ. ಮರ್ಯಾದೆಗೆ ಅಂಜಿ ಉದ್ಯಮಿ ಹಣ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ಮುಖಂಡ ನಿಜಾಮ್ ಹಾಗೂ ಜಿತೇಶ್ ಇಬ್ಬರೂ ಸ್ನೇಹಿತರು. ನಿಜಾಮ್ ಉದ್ಯಮಿ ಕಂಪನಿಯಲ್ಲಿಯೇ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಜಿತೇಶ್ ಮೂಲಕವೇ ಉದ್ಯಮಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಾನೆ. ವಿಡಿಯೋ, ಫೋಟೋ ಇಟ್ಟುಕೊಂಡು ಎರಡು ವರ್ಷಗಳ ಕಾಲ ನಿರಂತರ ಬ್ಲ್ಯಾಕ್ ಮೇಲ್ ಮಾಡಿ 2 ಕೋಟಿ 22 ಹಣ ವಸೂಲಿ ಮಾಡಿದ್ದಾರೆ.

2024ರ ಮೇ ತಿಂಗಳಲ್ಲಿ ಉದ್ಯಮಿ ಮನೆಗೆ ಬಂದು ಆರೋಪಿ ಜಿತೇಶ್ ಹೆಚ್ಚಿನ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾನೆ. ಆಗ ಉದ್ಯಮಿ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಿಜಾಮ್​​ಗೆ ವಿಷಯ ತಿಳಿಸಿದ್ದಾರೆ. ಆಗ ನಿಜಾಮ್​​ ದೂರುದಾರರ ಮನೆಗೆ ಬಂದು ಜಿತೇಶ್​ನನ್ನು ಕರೆದುಕೊಂಡು ಹೋಗಿದ್ದಾನೆ.

ಒಂದು ವಾರದ ಬಳಿಕ ನಿಜಾಮ್​ ದೂರುದಾರರ ಬಳಿ, ಜಿತೇಶ್ ನಿಮ್ಮ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇಸಿನಲ್ಲಿ ಜಿತೇಶ್ ಆತ್ಮಹತ್ಯೆ ನೋಟ್ ಬರೆದ ಪೋಟೋ ವೈರಲ್ ಮಾಡಿದರೆ ನಿಮ್ಮ ಮೇಲೆ ಕೇಸ್ ಆಗುತ್ತದೆ. 10 ವರ್ಷ ಜೈಲು ಶಿಕ್ಷೆ ಆಗುತ್ತದೆ ಎಂದು ಹೆದರಿಸಿದ್ದಾನೆ. ಆ ಬಳಿಕ ನಿಜಾಮ್​ 2024ರ ಜೂನ್‌ನಿಂದ 2026 ಜನವರಿ ತಿಂಗಳವರೆಗೆ 2,57,00,000 ರೂ. ಹಣವನ್ನು ಅವರಿಂದ ಪಡೆದುಕೊಂಡಿದ್ದಾನೆ. ಇದಾದ ಬಳಿಕ ಒಂದು ದಿನ ಜಿತೇಶ್‌ನನ್ನು ಉದ್ಯಮಿ ಮಂಗಳೂರಿನಲ್ಲಿ ನೋಡಿದ್ದಾರೆ. ಸತ್ತಿರುವ ವ್ಯಕ್ತಿ ಬದಿಕಿರುವುದು ಕಂಡು ಇಬ್ಬರೂ ಸೇರಿ ತನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂಬುದು ಅರಿವಾಗಿದೆ. ಈ ಬಗ್ಗೆ ನಿಜಾಮ್​ನಲ್ಲಿ ವಿಚಾರಿಸಿದಾಗ ಆತ ಮತ್ತೆ ಉದ್ಯಮಿಯನ್ನು ಬೆದರಿಸಿದ್ದಾನೆ.

2026ರ ಜೂ.1ರಂದು ಜಿತೇಶ್ ಮತ್ತೆ ಆವರಿಗೆ ಕರೆ ಮಾಡಿ ಆತನಲ್ಲಿ ಅವರ ಅಶ್ಲೀಲ ಫೋಟೋ ಮತ್ತು ವಿಡಿಯೋ ಇದ್ದು, ಇದನ್ನು ವೈರಲ್ ಮಾಡುವುದಾಗಿ ತಿಳಿಸಿ 10 ಲಕ್ಷ ರೂ. ಹಣದ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಲಿ ಫೋಟೋ ವೈರಲ್ ಮಾಡುವುದಾಗಿ, ಅದಕ್ಕೂ ಬಗ್ಗದಿದ್ದರೆ ಕೊಲೆ ಮಾಡುವುದಾಗಿ, ಮನೆಯವರಿಗೆ ಫೋಟೋ ಕಳುಹಿಸಿ ಮಾನ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ.

ಕಾಂಗ್ರೆಸ್ ಮುಖಂಡ ನಿಜಾಮ್ ವಿವಿಐಪಿಗಳ ಜೊತೆ, ದೊಡ್ಡ ದೊಡ್ಡ ರಾಜಕಾರಣಿಗಳು, ಉದ್ಯಮಿಗಳ ಜೊತೆ ಹಾಗೂ ತಮಿಳುನಾಡು ನೂತನ ಸಿಎಂ ವಿಜಯ್ ಜೊತೆಗೆ ತಾನಿರುವಂತೆ ಸೃಷ್ಟಿಸಿರುವ ಎಐ ಫೋಟೋಗಳನ್ನು ಬಳಸಿ ಬ್ಲ್ಯಾಕ್ ಮೇಲ್ ಮಾಡಿ ಧಮ್ಕಿ ಹಾಕುತ್ತಿದ್ದ. ಎರಡು ಕೋಟಿಗೂ ಅಧಿಕ ಹಣ ವಸೂಲಿ ಮಾಡಿದರೂ ಆರೋಪಿಗಳ ಹಣದಾಹ ಕಡಿಮೆಯಾಗಿಲ್ಲ. ಮತ್ತೆ ಬ್ಲ್ಯಾಕ್ ಮೇಲ್ ಮುಂದುವರೆದಾಗ ಉದ್ಯಮಿ ಮಂಗಳೂರಿನ ಊರ್ವ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ ಪೊಲೀಸರು ಕಾಂಗ್ರೆಸ್ ಮುಖಂಡ ನಜಾಮ್ ಹಾಗೂ ಜಿತೇಶ್ ನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular