HomeKarnatakaBREAKING NEWS: ಮೂವರು ಪಾದಚಾರಿಗಳ ಮೇಲೆ ಹರಿದ ಕಾರು: ಓರ್ವ ಸ್ಥಳದಲ್ಲೇ ದುರ್ಮರಣ

BREAKING NEWS: ಮೂವರು ಪಾದಚಾರಿಗಳ ಮೇಲೆ ಹರಿದ ಕಾರು: ಓರ್ವ ಸ್ಥಳದಲ್ಲೇ ದುರ್ಮರಣ

ಮಂಗಳೂರು: ರಸ್ತೆ ದಾಟುತ್ತಿದ್ದ ಮೂವರು ಪಾದಚಾರಿಗಳ ಮೇಲೆ ಕಾರು ಹರಿದು ಹೋಗಿದ್ದು, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರು ಹೊರವಲಯದ ಕುಳಾಯಿ ಬಳಿ ನಡೆದಿದೆ.

ರಾಯಚೂರು ಜಿಲ್ಲೆಯ ಸಿಂಧನೂರಿನ ದೀಪುಗೌಡ (50) ಮೃತ ದುರ್ದೈವಿ. ಅಪಘಾತದಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ ಮೂಲದ ಪ್ರದೀಪ್ ಕೊಲ್ಕಾರ್ ಮಂಗಳೂರಿನ ಕೋಡಿಕೆರೆ ನಿವಾಸಿ ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಳಾಯಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ಮೂವರ ಮೇಲೆ ಏರ್ಕಾಏಕಿ ಕಾರು ಹರಿದು ಹೋಗಿದೆ. ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular