HomeKarnatakaBIG NEWS: ಬೆಂಗಳೂರು ಬಳಿಕ ಮಂಡ್ಯದಲ್ಲಿಯೂ ದುರಂತ: ಚೆಸ್ಕಾಂ ನಿರ್ಲಕ್ಷ್ಯಕ್ಕೆ ರೈತ ಬಲಿ

BIG NEWS: ಬೆಂಗಳೂರು ಬಳಿಕ ಮಂಡ್ಯದಲ್ಲಿಯೂ ದುರಂತ: ಚೆಸ್ಕಾಂ ನಿರ್ಲಕ್ಷ್ಯಕ್ಕೆ ರೈತ ಬಲಿ


ಮಂಡ್ಯ: ರಾಜಧಾನಿ ಬೆಂಗಳೂರಿನಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗು ಬಲಿಯಾದ ಪ್ರಕರಣ ಮಾಸುವ ಮುನ್ನವೇ ಮಂಡ್ಯದಲ್ಲಿ ಚೆಸ್ಕಾಂ ನಿರ್ಲಕ್ಷ್ಯಕ್ಕೆ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಟಿ ಸಿಯಿಂದ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದು ವಿದ್ಯುತ್ ಪ್ರವಹಿಸಿ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿವಕುಮಾರ್ (43) ಮೃತ ರೈತ. ಕೆ.ಆರ್.ಪೇಟೆಯ ಬೆಳತೂರಿನಲ್ಲಿ ಈ ದುರಂತ ಸಂಭವಿಸಿದೆ.

ರೈತ ಶಿವಕುಮಾರ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಗೊತ್ತಾಗದೇ ತುಂಡಾಗಿ ಬಿದ್ದಿದ್ದ ತಂತಿ ಆಕಸ್ಮಿಕವಾಗಿ ತುಳಿದಿದ್ದಾರೆ. ಸ್ಥಳದಲ್ಲೇ ಶಿವಕುಮಾರ್ ಮೃತಪಟ್ಟಿದ್ದಾರೆ. ಎಷ್ಟು ಹೊತ್ತಾದರೂ ರೈತ ಮನೆಗೆ ಬಾರದಿದ್ದಾಗ, ಕುಟುಂಬದವರು ಜಮೀನಿಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೆಸ್ಕಾಂ ಅಧಿಕಾರಿಗಳ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular